ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಟಗರು ಪಲ್ಯ’ ಮುಹೂರ್ತ ನೆರವೇರಿದೆ. ನಾಗಭೂಷಣ್ ಅವರೊಂದಿಗೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ತನ್ನ ಮಗಳ ಚೊಚ್ಚಲ ಚಿತ್ರದ ಬಗ್ಗೆ ಪ್ರೇಮ್ ಮಾತಾನಾಡಿದ್ದಾರೆ.
ಮುಹೂರ್ತ ನಡೆದ ಬಳಿಕ ಮಾತಾನಾಡಿದ ಪ್ರೇಮ್, . ‘ಗಾಂಧಿನಗರಕ್ಕೆ ಮಾತ್ರವಲ್ಲ, ಕರ್ನಾಟಕದ ಜನರ ಹೃದಯದಲ್ಲಿ ಮನೆ ಮಗಳಾಗಿ ಎಂಟ್ರಿ ಆಗುತ್ತಿದ್ದಾಳೆ. ಅದು ಹೆಮ್ಮೆಪಡುವ ವಿಚಾರ’ ಎಂದು ಪ್ರೇಮ್ ಹೇಳಿದ್ದಾರೆ.
“‘ತಂದೆಯಾಗಿ ನನಗೆ ತುಂಬ ಸಂತೋಷ ಆಗುತ್ತಿದೆ. ನಾನು ಟ್ರೆಂಡಿಂಗ್ನಲ್ಲಿ ಇರುವಾಗಲೇ ಮಗಳನ್ನು ಹೀರೋಯಿನ್ ಆಗಿ ನೋಡುವ, ಆಕೆಯ ಕಟೌಟ್ ನೋಡುವ ಸೌಭಾಗ್ಯ ನನಗೆ ಸಿಕ್ಕಿದೆ. ಗೆಳೆಯ ನಿರಂಜನ್, ಡಾಲಿ ಧನಂಜಯ್ ಹಾಗೂ ನಿರ್ದೇಶಕ ಉಮೇಶ್ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಮೂವರು ಸೇರಿಕೊಂಡು ಅಪ್ಪಟ ಕನ್ನಡನಾಡಿನ ಸ್ಕ್ರಿಪ್ಟ್ ಮಾಡಿದ್ದಾರೆ. ಆ ಬಗ್ಗೆ ಸಂತೋಷ ಇದೆ’ ಎಂದು ಪ್ರೇಮ್ ಹೇಳಿದ್ದಾರೆ.

