HomeMoviesಸ್ಯಾಂಡಲ್ವುಡ್ ಗೆ ಸೇರ್ಪಡೆಯಾಗುತ್ತಿದೆ ಮತ್ತೊಂದು ನೈಜಘಟನೆ ಆಧಾರಿತ ಚಿತ್ರ 'ಟೆಕ್ವಾಂಡೋ ಗರ್ಲ್'! ಬ್ಲಾಕ್ ಬೆಲ್ಟ್ ಗೆದ್ದ...

ಸ್ಯಾಂಡಲ್ವುಡ್ ಗೆ ಸೇರ್ಪಡೆಯಾಗುತ್ತಿದೆ ಮತ್ತೊಂದು ನೈಜಘಟನೆ ಆಧಾರಿತ ಚಿತ್ರ ‘ಟೆಕ್ವಾಂಡೋ ಗರ್ಲ್’! ಬ್ಲಾಕ್ ಬೆಲ್ಟ್ ಗೆದ್ದ ಹತ್ತು ವರ್ಷದ ಪೋರಿಯ ಕಥೆಯೇ ಈ ಸಿನಿಮಾ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನೈಜ ಘಟನೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಅಂತಹ ಸಿನಮಾಗಳ ಸಾಲಿಗೆ ಹೀಗೊಂದು ಚಿತ್ರ ಸೇರ್ಪಡೆಯಾಗಿದೆ. ಹೆಸರು ಟೇಕ್ವಾoಡೋ ಗರ್ಲ್ . ಈ ಚಿತ್ರದ ಹೈಲೆಟ್ ಹತ್ತು ವರ್ಷದ ಪೋರಿ.
ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ರಿಲೀಸ್ ಗೆ ರೆಡಿಯಾಗಿದೆ. ಅಂದಹಾಗೆ ಇದೊಂದು ಟೇಕ್ವಾoಡೋ ಸಮರ ಕಲೆಯ ಸುತ್ತ ನಡೆವ ಕಥೆ.

ನಾಲ್ಕು ಬಾರಿ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದ ಹುಡುಗಿ ಈಗಚಿತ್ರದ ಆಕರ್ಷಣೆ.

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲೆ ನಿತ್ಯ ಕೃತ್ಯಗಳು ನಡೆಯುತ್ತಲೇ ಇವೆ.
ಹೆಣ್ಣು ತನ್ನನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ “ಟೇಕ್ವಾಂಡೋ ಗರ್ಲ್” ತಯಾರಾಗಿದೆ.

ಋತು ಸ್ಪರ್ಷ ಚಿತ್ರದ ಪ್ರಮುಖ ಆಕರ್ಷಣೆ. ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತಹ ಸಮಯದ ನಡುವೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆ ಮೂಲಕ ಸಮಾಜಕ್ಕೆ ಹೇಗೆ ಮಾದರಿ ಆಗುತ್ತಾಳೆ ಎನ್ನುವುದೇ ಕಥೆಯ ಎಳೆ.

ಇನ್ನು ಐದನೇ ತರಗತಿಯಲ್ಲಿ ಓದುತ್ತಿರುವ ಋತು ವರ್ಷ 3ನೇ ವಯಸ್ಸಿನಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ.

ಈಕೆಯ ಸಾಧನೆಗೆ ಮೂಲ ಪ್ರೇರಣೆ ತಾಯಿ ಡಾ,, ಸುಮೀತಾ ಪ್ರವೀಣ್.
ಮಗಳಿಗೆ ಸ್ವಯಂ ರಕ್ಷಣೆ ಮುಖ್ಯ ಎನ್ನುವುದನ್ನು ತಿಳಿ ಹೇಳಿ ಆಕೆಯನ್ನು 3ನೇ ವಯಸ್ಸಿನಿಂದ ತಯಾರಿ ಮಾಡಿದ್ದಾರೆ.
ಇದು ಮಗಳಿಗಷ್ಟೇ ಸೀಮಿತ ವಾಗಬಾರದು ಎಂದು ಅದನ್ನೇ ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಹೇಳಲು
ಟೇಕ್ವಾಂಡೋ ಗರ್ಲ್
ಸಿನಿಮಾ ನಿರ್ಮಾಪಕರಾಗಿಯೂ ಚಿತ್ರವನ್ನು ನಿರ್ಮಿಸಿದ್ದಾರೆ
ಈ ಚಿತ್ರಕ್ಕೆ ಅವರ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.
ಮಗಳ ಹುಟ್ಟು ಹಬ್ಬದಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ನನ್ನ ಮಗಳಷ್ಟೇ ಅಲ್ಲ ಎಲ್ಲಾ ಹೆಣ್ಣು ಮಕ್ಕಳು ಟೇಕ್ವಾಂಡೋ ಕಲೆ ಕಲಿಯ ಬೇಕು ಎಂಬುದು ಸುಮೀತಾ ಮಾತು.

ಈ ಚಿತ್ರಕ್ಕೆ ರವೀಂದ್ರ ವಂಶಿ ನಿರ್ದೇಶಕರು. ಈ ಹಿಂದೆ ಪುಟಾಣಿ ಸಫಾರಿ ಚಿತ್ರ ನಿರ್ದೇಶನ ಮಾಡಿದ್ದ ಇವರು, ಟೇಕ್ವಾಂಡೋ ಗರ್ಲ್ ಚಿತ್ರ ನಿರ್ದೇಶನಕ್ಕೆ 25 ದಿನ ತರಬೇತಿ ಪಡೆದು ಅದರ ಬಗ್ಗೆ ತಿಳಿದುಕೊಂಡು ನಂತರ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇದು ಮಕ್ಕಳ ಚಿತ್ರ ನಿಜ ಆದರೆ ಮಕ್ಕಳಿಂದ ದೊಡ್ಡವರಿಗಾಗಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ಸ್ಕೂಲ್ ಮಕ್ಕಳಿಗೆ ತೋರಿಸಲು ನಿರ್ದರಿಸಿದ್ದೇವೆ ಎಂದು ಹೇಳಿದರು.

ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ M.S. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚೆಕ್ ದೇ ಇಂಡಿಯಾ, ದಂಗಲ್ ನಂತಹ ಚಿತ್ರ ಇದಾಗಿದ್ದು ಎಲ್ಲರೂ ಇಂತಹ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಟ ಗಣೇಶ್ ರಾವ್ ಚಿತ್ರದ  ಹಾಡುಗಳನ್ನು ಬಿಡುಗಡೆ ಮಾಡಿದರು.
ಚಿತ್ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ.

RELATED ARTICLES

Most Popular

Share via
Copy link
Powered by Social Snap