ಇಂಗ್ಲೆಂಡ್ ಚಾಂಪಿಯನ್ ಆಗುವುದರೊಂದಿಗೆ ಟಿ20 -ವಿಶ್ವಕಪ್ ಗರ ತೆರೆ ಬಿದ್ದಿದೆ.
ಎಲ್ಲಾ ತಂಡಗಳಲ್ಲಿ ಆಟಗಾರರು ಉತ್ತಮವಾಗಿ ಆಡಿದ್ದಾರೆ. ಆಯಾ ಸಂದರ್ಭದಲ್ಲಿ ಗೆಲುವಿಗಾಗಿ ಶ್ರಮಿಸಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ಐಸಿಸಿ ತನ್ನ ಶ್ರೇಷ್ಠ ಟಿ-20 ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಪ್ರಮುಖ ಇಬ್ಬರು ಸ್ಟಾರ್ ಆಟಗಾರರು ಒಳಗೊಂಡಿದ್ದಾರೆ.
ಜಾಸ್ ಬಟ್ಲರ್, ಅಲೆಕ್ಸ್ ಹೇಲ್ಸ್,ಸ್ಯಾಮ್ ಕರನ್, ಮಾರ್ಕ್ ವುಡ್ ಚಾಂಪಿಯನ್ ತಂಡದಿಂದ ಸ್ಥಾನ ಪಡೆದುಕೊಂಡಿದ್ದಾರೆ.
ಮೊದಲನೆಯದಾಗಿ ವಿರಾಟ್ ಕೊಹ್ಲಿ ಕೂಟದಲ್ಲೇ ಸರ್ವಾಧಿಕ 296 ರನ್ ಬಾರಿಸಿದ್ದು ಕಿಂಗ್ ಕೊಹ್ಲಿ.
ಪಾಕ್ ಎದುರಿನ ಆರಂಭಿಕ ಪಂದ್ಯದಲ್ಲಿ ಅಜೇಯ 82 ರನ್ , ಬಾಂಗ್ಲಾದೇಶ ವಿರುದ್ಧ ಅಜೇಯ 64 ರನ್, ನೆದರ್ಲೆಂಡ್ಸ್ ವಿರುದ್ಧ ಅಜೇಯ 62 ಹಾಗೂ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ 50 ರನ್ ಹೊಡೆದಿದ್ದರು.
ಕೊಹ್ಲಿ ಐಸಿಸಿ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಈ ಬಾರಿಯ ಟಿ-20 ವಿಶ್ವಕಪ್ ನಲ್ಲಿ ಶ್ರೇಷ್ಠ ಮಟ್ಟದ ಆಟವನ್ನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಗರಿಷ್ಠ ರನ್ ಸಾಧಕರ ಯಾದಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ (239 ರನ್). 3 ಅರ್ಧ ಶತಕಗಳು ಇದರಲ್ಲಿ ಸೇರಿವೆ.
ನೆದರ್ಲೆಂಡ್ಸ್ ಎದುರು ಔಟಾಗದೆ 51ರನ್ ದಕ್ಷಿಣ ಆಫ್ರಿಕಾ ವಿರುದ್ಧ 68 ಹಾಗೂ ಜಿಂಬಾಬ್ವೆ ವಿರುದ್ಧ ಕೇವಲ 25 ಎಸೆತಗಳಲ್ಲಿ ಅಜೇಯ 61 ರನ್ ಸಿಡಿಸಿ ಸೂರ್ಯ ಅಮೋಘ ಆಟವನ್ನಾಡಿದ್ದಾರೆ. ಈ ದೃಷ್ಟಿಯಿಂದ ಅವರನ್ನು ಐಸಿಸಿ ತನ್ನ ಶ್ರೇಷ್ಠ ತಂಡದಲ್ಲಿ ಸೇರಿಸಿದೆ.
5ನೇ ಹಾಗೂ 6ನೇ ಸ್ಥಾನ ಜಿಂಬಾಬ್ವೆಯ ಸಿಕಂದರ್ ರಝ ಮತ್ತು ನ್ಯೂಜಿಲ್ಯಾಂಡ್‌ನ ಗ್ಲೆನ್ ಫಿಲಿಪ್ಸ್ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ಶಾದಾಬ್ ಖಾನ್, ಇಂಗ್ಲೆಂಡ್ ನ ಸ್ಯಾಮ್ ಕರನ್ ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಸಿ ವಿಶ್ವಕಪ್ ಶ್ರೇಷ್ಠ ತಂಡ:
1 ಅಲೆಕ್ಸ್ ಹೇಲ್ಸ್
2 ಜಾಸ್ ಬಟ್ಲರ್
3 ವಿರಾಟ್ ಕೊಹ್ಲಿ
4 ಸೂರ್ಯಕುಮಾರ್ ಯಾದವ್
5 ಗ್ಲೆನ್ ಫಿಲಿಪ್ಸ್
6 ಸಿಕಂದರ್ ರಝ
7 ಶಾದಾಬ್ ಖಾನ್
8 ಸ್ಯಾಮ್ ಕರನ್
9 ಆ್ಯನ್ರಿಚ್ ನೋರ್ಜೆ
10 ಮಾರ್ಕ್ ವುಡ್
11 ಶಾಹೀನ್ ಶಾ ಅಫ್ರಿದಿ
12 ಹಾರ್ದಿಕ್ ಪಾಂಡ್ಯ

