ಮೋಹಕ ತಾರೆ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಮೊದಲ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ.
ಎರಡು ಚಿತ್ರಗಳನ್ನು ನಿರ್ಮಾಣ ಮಾಡಲಿದ್ದೇವೆ ಎಂದಿರುವ ರಮ್ಯಾ ಪ್ರೊಡಕ್ಷನ್ ನ ಮೊದಲ ಚಿತ್ರದ ಟೈಟಲ್ ಅನೌನ್ಸ್ ಮೆಂಟ್ ಮಾಡಿದ್ದಾರೆ.
ಈ ಹಿಂದೆ ಅಂದುಕೊಂಡಂತೆ ಅವರು, ರಾಜ್.ಬಿ.ಶೆಟ್ಟಿ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಬ್ಯೂಟಿಫುಲ್ ಪೋಸ್ಟರ್ ರಿಲೀಸ್ ಮಾಡಿ, ಟೈಟಲ್ ರಿವೀಲ್ ಮಾಡಿದ್ದಾರೆ.


ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ನಿರ್ಮಾಣದ ಮೊದಲ ಸಿನಿಮಾಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಟೈಟಲ್ ಇಡಲಾಗಿದೆ. ಇದರಲ್ಲಿ ಮೋಹಕ ತಾರೆ ರಮ್ಯಾ ಅವರು ನಟಿಸುತ್ತಿದ್ದಾರೆ ಎನ್ನುವುದು ಹೈಲೈಟ್. ಬಹು ಸಮಯದ ಬಳಿಕ ರಮ್ಯಾ ಅವರು ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ರಾಜ್ ಬಿ ಶೆಟ್ಟಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ರಮ್ಯಾ ಅವರು ನಿರ್ಮಾಣದ ಜವಾಬ್ದಾರಿಯೊಂದಿಗೆ ನಟನೆಯಲ್ಲೂ ಕಂಬ್ಯಾಕ್ ಮಾಡುತ್ತಿರುವುದು ವಿಶೇಷ.
ರಮ್ಯಾ ಹಾಗೂ ರಾಜ್.ಬಿ. ಶೆಟ್ಟಿ ಇಬ್ಬರು ಅಭಿನಯ ಮಾಡುತ್ತಿದ್ದಾರೆ. ‘ಗುರುಡ ಗಮನ ವೃಷಭ ವಾಹನ’ಕ್ಕೆ ಮ್ಯೂಸಿಕ್ ನೀಡಿದ್ದ ಮಿದುನ್ ಮುಕುಂದನ್ ಮ್ಯೂಸಿಕ್ ನೀಡಲಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮಾಡಲಿದ್ದಾರೆ.



