ರಾಜ್ ಬಿ ಶೆಟ್ಟಿ ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರೇ ನಿರ್ದೇಶನ ಹಾಗೂ ನಟಿಸಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇದರೊಂದಿಗೆ ಮೋಹಕ ತಾರೆ ರಮ್ಯಾ ಅವರು ತಮ್ಮ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ ಇದಾಗಿರುವುದರಿಂದ ಕುತೂಹಲ ಹೆಚ್ಚಿಸಿದೆ.
ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣವನ್ನು ಮುಗಿಸಿರುವ ಚಿತ್ರ ತಂಡ ಇತ್ತೀಚೆಗೆ ಸಿನಿಮಾದ ನಾಯಕಿ ಸಿರಿ ರವಿಕುಮಾರ್ ಅವರ ಪಾತ್ರವನ್ನು ರಿವೀಲ್ ಮಾಡಿತ್ತು. ‘ಪ್ರೇರಣಾ’ ಎನ್ನುವ ಪಾತ್ರವನ್ನು ಸಿರಿ ಅವರು ಮಾಡಿದ್ದಾರೆ.
ಇದೀಗ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಅವರ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಮಂಕಿ ಕ್ಯಾಪ್ ತೊಟ್ಟುಕೊಂಡು, ಗಡ್ಡ ಬಿಟ್ಟಿರುವ ರಾಜ್ ಬಿ ಶೆಟ್ಟಿ ಅವರು ಕೈಯಲ್ಲೊಂದು ಚಹಾದ ಕಪ್ ಹಿಡಿದುಕೊಂಡು ಯೋಚನೆಯಲ್ಲಿ ಕೂತಿರುವ ಪೋಸ್ಟರ್ ರಿಲೀಸ್ ಆಗಿದೆ.
ಮಿದುನ್ ಮುಕುಂದನ್ ಮ್ಯೂಸಿಕ್, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮಾಡಿರುವ ಸಿನಿಮಾ ಶೀಘ್ರದಲ್ಲಿ ತೆರೆಗೆ ಬರಲಿದೆ.

