ರಾಜ್ ಬಿ ಶೆಟ್ಟಿ ನಿರ್ದೇಶನ ಹಾಗೂ ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೂಟಿಂಗ್ ಮುಗಿಸಿರುವುದು ಗೊತ್ತೇ ಇದೆ.
ರಮ್ಯಾ ನಿರ್ಮಾಪಕಿಯಾಗಿ ಮೊದಲ ಬಾರಿ ತೆರೆ ಹಿಂದಿನ ಜವಾಬ್ದಾರಿವಹಿಸಿಕೊಂಡಿದ್ದು, ಇದರೊಂದಿಗೆ ತನ್ನ ಸಿನಿಮಾಗಳಿಂದಲೇ ಸುದ್ದಿಯಾಗುವ ರಾಜ್ ಬಿ ಶೆಟ್ಟಿ ಅವರ ನಿರ್ದೇಶನ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಈಗ ಸಿನಿಮಾದ ಕುರಿತು ಮತ್ತೊಂದು ಹೊಸ ಅಪ್ಡೇಟ್ ಹೊರ ಬಿದ್ದಿದೆ. ರಾಜ್ ಬಿ ಶೆಟ್ಟಿ ಅವರೊಂದಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಸಿರಿ ರವಿಕುಮಾರ್ ಅವರ ಪಾತ್ರದ ಲುಕ್ ಹಾಗೂ ಪರಿಚಯವನ್ನು ಚಿತ್ರ ತಂಡ ಮಾಡಿದೆ.
ಸಿರಿ ರವಿಕುಮಾರ್ ಪ್ರೇರಣಾ ಎಂಬ ಪಾತ್ರವನ್ನು ಮಾಡಿದ್ದಾರೆ. ಮೇಲ್ನೋಟಕ್ಕೆ ಸಿರಿ ರವಿಕುಮಾರ್ ಚಿತ್ರದಲ್ಲಿ ಶಿಕ್ಷಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎಂದು ಕಾಣುತ್ತದೆ.
ಚಿತ್ರೀಕರಣ ಮುಗಿಸಿರುವ ಚಿತ್ರ ಶೀಘ್ರದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

