ಮೋಹಕ ತಾರೆ ರಮ್ಯಾ ಆ್ಯಪಲ್ ಬಾಕ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಇನ್ನೇನು ಸಿನಿಮಾ ತೆರೆಗೆ ಬರಲಿದೆ ಎನ್ನುವಾಗಲೇ ಚಿತ್ರಕ್ಕೆ ಟೈಟಲ್ ಕಾಟ ಶುರುವಾಗಿದೆ.
ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿರುವ ಸಿನಿಮಾದ ಟೈಟಲನ್ನು ಬಳಸಬಾರದೆಂದು ಹಿರಿಯ ನಿರ್ದೇಶಕ ರಾಜೇಂದ್ರ ಬಾಬು ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
1990 ರಲ್ಲಿ ತೆರೆಗೆ ಬಂದ ರವಿಚಂದ್ರನ್ ಅಭಿನಯದ ‘ಬಣ್ಣದ ಹೆಜ್ಜೆ’ ಸಿನಿಮಾದ ಸೂಪರ್ ಹಿಟ್ ಹಾಡು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಈ ಸಿನಿಮಾವನ್ನು ರಾಜೇಂದ್ರ ಬಾಬು ಅವರೇ ನಿರ್ದೇಶನ ಮಾಡಿದ್ದರು. ಇದೇ ಟೈಟಲನ್ನು ಮತ್ತೊಮ್ಮೆ ನೋಂದಣಿ ಮಾಡಿಕೊಂಡು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಹಾಸಿನಿ ಅವರನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾ ಮಾಡಲು ಹೊರಟಿದ್ದರು.
ಸಿನಿಮಾದ 80% ಚಿತ್ರೀಕರಣವೂ ಮುಗಿದಿತ್ತುಮ ಆಗ ಅಂಬರೀಶ್ ಅವರು ನಿಧನರಾದರು. ಆ ಕಾರಣದಿಂದ ಸಿನಿಮಾ ಅಲ್ಲೇ ನಿಂತಿತ್ತು. ನಾನು ಈಗಾಗಲೇ ಈ ಸಿನಿಮಾದ ಟೈಟಲ್ ನೋಂದಣಿ ಮಾಡಿಕೊಂಡಿದ್ದೇನೆ. ಹೀಗಾಗಿ ಇತರರಿಗೆ ಈ ಟೈಟಲನ್ನು ಬಳಸಲು ಅವಕಾಶ ಕೊಡಬಾರದೆಂದು ರಾಜೇಂದ್ರ ಸಿಂಗ್ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
ಸದ್ಯ ಇದಕ್ಕೆ ಆ್ಯಪಲ್ ಬಾಕ್ಸ್ ನಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

