HomeNewsಚೊಚ್ಚಲ ನಿರ್ದೇಶನದಲ್ಲಿ "ಸೂರ್ಯ"ನ ಕಥೆ ಹೇಳಲು ಹೊರಟ ಸಾಗರ್‌

ಚೊಚ್ಚಲ ನಿರ್ದೇಶನದಲ್ಲಿ “ಸೂರ್ಯ”ನ ಕಥೆ ಹೇಳಲು ಹೊರಟ ಸಾಗರ್‌

ಚಂದವನದಲ್ಲಿ ಹಲವಾರು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಸಾಗರ್‌ “ಸೂರ್ಯ” ಸಿನಿಮಾದ ಮೂಲಕ ನಿರ್ದೇಶಕರಾಗಲು ಹೊರಟಿದ್ದಾರೆ. ತಮ್ಮ ಮೊದಲ ಸಿನಿಮಾಕ್ಕೆಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.


ಇತ್ತೀಚೆಗೆ “ಸೂರ್ಯ” ಚಿತ್ರದ ಲೇಔಟ್ ನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮುಹೂರ್ತ ನೆರವೇರಿತು.
“ಸೂರ್ಯ” ಚಿತ್ರದಲ್ಲಿ ಹೊಸ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ನಿರ್ದೇಶಕ ಸಾಗರ್ ಚಿತ್ರದ ಬಗ್ಗೆ ಮಾತಾನಾಡಿ, ಸೂರ್ಯ ನಮ್ಮ ಚಿತ್ರದ ನಾಯಕನ ಹೆಸರು. ನಾಯಕ ಪ್ರೀತಿಗೋಸ್ಕರ ಯುದ್ದವನ್ನೇ ಮಾಡಿ ಹೇಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದೇ ಸೂರ್ಯ ಚಿತ್ರದ ಕಾನ್ಸೆಪ್ಟ್. ಬೆಂಗಳೂರು ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ ಹಾಡುಗಳಿಗೆ ಮಡಿಕೇರಿ, ಮೈಸೂರು, ಪೂನಾಗೆ ಹೋಗುವ ಯೋಜನೆಯಿದೆ.

ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ನೋಡಬಹುದು. ಅಲ್ಲದೆ ಶೃತಿ ಅವರು ಒಬ್ಬ ಡಾಕ್ಟರ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಿನ ಕಾಲದ ಅಮ್ಮನೂ ಹೌದು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರು ಉತ್ತರ ಕರ್ನಾಟಕ ಶೈಲಿಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಮ್ಮ ಚಿತ್ರದಲ್ಲಿ 5 ಹಾಡುಗಳಿದ್ದು ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹದ್ದೂರ್ ಚೇತನ್, ನಾನು ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದೇವೆ. ಮುಂದಿನ ವಾರದಿಂದ ಶೂಟಿಂಗ್ ಹೊರಡಲಿದ್ದೇವೆ ಎಂದು ಹೇಳಿದರು.


ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮನುರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

RELATED ARTICLES

Most Popular

Share via
Copy link
Powered by Social Snap