ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಸದ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿರುವ ಯುವನಟರುಗಳಲ್ಲಿ ಒಬ್ಬರು. ‘ಯಂಗ್ ರೆಬೆಲ್ ಸ್ಟಾರ್’ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಇವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರ ಮುಂದಿನ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಕೂಡ ಬಿಡುಗಡೆಗೆ ಸನ್ನಿಹಿತವಾಗುತ್ತಿದೆ. ಇದೆಲ್ಲದರ ನಡುವೆ ಅಭಿಷೇಕ್ ಅಂಬರೀಶ್ ಅವರು ಹಸೆಮಣೆ ಏರುವ ದಿನ ಕೂಡ ಹತ್ತಿರವಾಗುತ್ತಿದೆ. ಸದ್ಯ ತಮ್ಮ ವಿವಾಹ ಸಮಾರಂಭಕ್ಕೆ ನಮ್ಮ ದೇಶದ ಸನ್ಮಾನ್ಯ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರನ್ನು, ತಮ್ಮ ತಾಯಿ ಸುಮಲತಾ ಅಂಬರೀಶ್ ಅವರ ಜೊತೆ ತೆರಳಿ ಆಹ್ವಾನಿಸಿದ್ದಾರೆ.


ಮಂಡ್ಯ ಜಿಲ್ಲೆಯ ಸಂಸದೆ ಕೂಡ ಆಗಿರುವಂತಹ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಪುತ್ರ ಅಭಿಷೇಕ್ ಅಂಬರೀಶ್ ಅವರ ಜೊತೆಗೆ ಖುದ್ದಾಗಿ ತೆರಳಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಮಗನ ಮದುವೆಯ ಶುಭಗಳಿಗೆಗೆ ಆಹ್ವಾನ ನೀಡಿದ್ದಾರೆ. ಈ ಗಳಿಗೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಷೇಕ್ ಅಂಬರೀಶ್ ಹಾಗು ಸುಮಲತಾ ಅಂಬರೀಶ್ ಹಂಚಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ಅವರು ಕಳೆದ ಡಿಸೆಂಬರ್ ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡು ತಮ್ಮ ಮದುವೆಯ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಇವರ ವಿವಾಹ ಕೂಡ ನಡೆಯಲಿದೆ. ಇದೇ ಸಮಾರಂಭಕ್ಕೆ ಸದ್ಯ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದ್ದು, ಈ ಫೋಟೋಗಳು ಇದೀಗ ಎಲ್ಲೆಡೆ ಹರಿದಾಡುತ್ತಿವೆ.



