ಭಾರತ ಚಿತ್ರರಂಗದ ಯಶಸ್ವಿ ಹಾಗೂ ದೊಡ್ಡ ನಿರ್ದೇಶಕ ಎಸ್.ಎಸ್. ರಾಜಮೌಳಿ ಆರ್.ಆರ್.ಆರ್. ಬಳಿಕ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡಲು ಸಿದ್ದತೆ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ವೊಂದನ್ನು ಕೊಟ್ಟಿದ್ದಾರೆ.
‘ಬಾಹುಬಲಿ’, ಆರ್.ಆರ್.ಆರ್ ಬಳಿಕ ರಾಜಮೌಳಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಮಾಡಲಿದ್ದಾರೆ. ಈ ಸಿನಿಮಾ ಅನೌನ್ಸ್ ಆದ ಬಳಿಕ ಪ್ರೇಕ್ಷಕರ ಕುತೂಹಲ, ನಿರೀಕ್ಷೆ ದುಪ್ಪಟ್ಟಾಗಿದೆ.
ಸಿನಿಮಾ ಯಾವ ಬಗೆ ಇರಲಿದೆ ಎನ್ನುವುದನ್ನು ಸ್ವತಃ ನಿರ್ದೇಶಕ ರಾಜಮೌಳಿ ಅವರು ವಿಷಯವನ್ನು ರಿವೀಲ್ ಮಾಡಿದ್ದಾರೆ.
ದಕ್ಷಿಣ ಭಾರತದ ಸೂಪರ್ ಹಿಟ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಆರ್.ಆರ್.ಆರ್ ಬಳಿಕ ಯಾವ ಮತ್ತು ಯಾರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವುದು ಕೆಲ ದಿನಗಳ ಹಿಂದೆ ರಿವೀಲ್ ಆಗಿತ್ತು. ಈಗ ಈ ಸಿನಿಮಾದ ಬಗ್ಗೆ ಮತ್ತೊಂದು ದೊಡ್ಡ ಅಪ್ಡೇಟ್ ಹೊರ ಬಿದ್ದಿದೆ.
ಸಿನಿಮಾದ ಸಮಾರಂಭವೊಂದರಲ್ಲಿ ಈ ಬಗ್ಗೆ ಮಾತಾನಾಡಿರುವ ಅವರು, ಮಹೇಶ್ ಬಾಬು ಅವರೊಂದಿಗಿನ ನನ್ನ ಮುಂದಿನ ಚಿತ್ರ ವಿಶ್ವ ಪರ್ಯಟನೆ(ಪಯಣ) ವುಳ್ಳ ಸಾಹಸಮಯವಾದ ಸಿನಿಮಾ, ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ರಂಜಿಸಲಿದೆ. ಸಿನಿಮಾದ ಸ್ಕಿಪ್ಟ್ ವರ್ಕ್ ನಡೆಯುತ್ತಿದ್ದು, ಈ ಸಿನಿಮಾ,ಜೇಮ್ಸ್ ಬಾಂಡ್ ಅಥವಾ ಇಂಡಿಯಾನ ಜೋನ್ಸ್ ಸಿನಿಮಾದಲ್ಲಿನ ಸಾಹಸದಾಗೆ ಇರುತ್ತದೆ. ಭಾರತೀಯ ಸ್ಟೈಲ್ ನಲ್ಲಿ ಇರುತ್ತದೆ. ಎರಡು ತಿಂಗಳು ಮಹೇಶ್ ಬಾಬು ಅವರೊಂದಿಗೆ ವರ್ಕ್ ಶಾಪ್ ನಡೆಸಲಿದ್ದೇನೆ. 2023 ರಲ್ಲಿ ಚಿತ್ರೀಕರಣ ಆರಂಭಿಸಲಿದ್ದೇನೆ ಎಂದು ಹೇಳಿದ್ದಾರೆ.
ದಟ್ಟ ಕಾಡಿನ ನಡುವೆ ಸಿನಿಮಾದ ಶೂಟ್ ನಡೆಯಲಿದ್ದು, ಇದಕ್ಕಾಗಿ ಗ್ರಾಫಿಕ್ಸ್ ತಂಡ ಸಿದ್ದತೆ ನಡೆಸುತ್ತಿದೆ.
ವರದಿಯ ಪ್ರಕಾರ ಈ ಸಿನಿಮಾ ರಾಜಮೌಳಿ ಅವರ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಭಿನ್ನವಾಗಿ ಮೂಡಿ ಬರಲಿದೆ ಎಂದು ತಿಳಿದು ಬಂದಿದೆ.
ಚಿತ್ರದ ಕಲಾವಿದರು ಹಾಗೂ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

