‘ಆರ್ ಆರ್ ಆರ್’ ಇಡೀ ಸಿನಿ ರಂಗವನ್ನು ದಕ್ಷಿಣ ಭಾರತದೆಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ. ಎಸ್ಎಸ್ ರಾಜಮೌಳಿ ನಿರ್ದೇಶನದ ಸಿನಿಮಾ ಸಾವಿರ ಕೋಟಿ ಕ್ಲಬ್ ಗೆ ಸೇರಿದ್ದು ಒಂದೆಡೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ರಿಲೀಸ್ ಆಗಿ ಸದ್ದು ಮಾಡಿದೆ.
ಇತ್ತೀಚೆಗೆ ಜಪಾನ್ ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಈ ನಡುವೆ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ಹರಿಸಿಕೊಂಡು ಬಂದಿದೆ.
ಆಸ್ಕರ್ ಸಾಲಿಗೆ ಸಿನಿಮಾ ಆಯ್ಕೆಯಾಗಿಲ್ಲ ಅನ್ನೋ ಬೇಸರ ಪ್ರೇಕ್ಷಕರಲ್ಲಿ ಇದೆ. ಆದರೂ ಸಿನಿಮಾದ ಹೈಪ್ ಕಮ್ಮಿಯಾಗಿಲ್ಲ. ಇದಕ್ಕೆ ಕಾರಣ ನ್ಯೂಯಾರ್ಕ್ ನಲ್ಲಿ ಸಿನಿಮಾಕ್ಕೆ ಸಿಕ್ಕ ಪ್ರಶಸ್ತಿ.
ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ನಲ್ಲಿ
ಎಸ್ಎಸ್ ರಾಜಮೌಳಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಡಿ.2 ರಂದು ಪಡೆದುಕೊಂಡಿದ್ದಾರೆ.
ಜೂನಿಯರ್ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಮುಂತಾದ ಕಲಾವಿದರು ನಟಿಸಿದ್ದಾರೆ.

