ಶಾರುಖ್ ಖಾನ್ ‘ಪಠಾಣ್’ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾದ ಬಗ್ಗೆ ಹುಟ್ಟಿರುವ ಬೆನ್ನಲ್ಲೇ ಅಭಿಮಾನಿಗಳೊಂದಿಗೆ ಶಾರುಖ್ ಖಾನ್ ಅಸ್ಕ್ ಮಿ ಎನಿಥಿಂಗ್ ಎಂದು ಟ್ವಿಟರ್ ನಲ್ಲಿ ಪ್ರಶ್ನೆಗಳನ್ನು ಕೇಳಲು ಹೇಳಿದ್ದಾರೆ.
ಈ ವೇಳೆ ಅಭಿಮಾನಿಗಳು ಶಾರುಖ್ ಅವರ ಬಳಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು. ಚಕ್ ದೇ ಇಂಡಿಯಾದಂತಹ ಸಿನಿಮಾಗಳನ್ನು ಯಾಕೆ ಮತ್ತೊಮ್ಮೆ ಮಾಡಬಾರದೆಂದು ಫ್ಯಾನ್ಸ್ ಗಳು ಪ್ರಶ್ನೆಗಳನ್ನು ಕೇಳಿದ್ದಾರೆ.
ಎಲ್ಲ ಪ್ರಶ್ನೆಗಳಿಗೂ ಕಿಂಗ್ ಖಾನ್ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಅಭಿಯೊಬ್ಬ ಶಾರುಖ್ ಅವರ ಬಳಿ `ಕೆಜಿಎಫ್ 2′ ಸಿನಿಮಾ ನೋಡಿದ್ದೀರಾ. ಯಶ್ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಕೇಳಿದ್ದಾನೆ.
ಇದಕ್ಕೆ ಶಾರುಖ್ ಖಾನ್ ಅವರು ಒಂದೇ ಪದದಲ್ಲಿ `ಯಶ್’ ಈಸ್ ವಾವ್ ಎಂದು ಹೇಳಿದ್ದಾರೆ. ಸದ್ಯ ಕಿಂಗ್ ಖಾನ್ ಅವರ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

