ಕೆಜಿಎಫ್ ಸರಣಿ ದಕ್ಷಿಣ ಭಾರತದ ದೊಡ್ಡ ಚಿತ್ರಗಳಲ್ಲೊಂದು. ಪ್ರಶಾಂತ್ ನೀಲ್ – ಯಶ್ ಮತ್ತೆ ಯಾವಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಕೆಜಿಎಫ್ -3 ಯಾವಾಗ ಬರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.
ಯಶ್, ರಾಕಿ ಆಗಿ ಫೈಟ್, ಮಾಸ್ ನಲ್ಲಿ ಮಿಂಚಿದ್ದರು. ಕೆಜಿಎಫ್ -2 ಬಳಿಕ ಯಶ್ ಮುಂದಿನ ಚಿತ್ರ ಯಾವುದು, ಯಾರೊಂದಿಗರ ಎನ್ನುವುದು ಯಶ್ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ.
ಕೆಜಿಎಫ್ ಸರಣಿಯಲ್ಲಿ ಯಶ್ ಎಷ್ಟು ಮಿಂಚಿದ್ರೋ, ಅಷ್ಟೇ ನಾಯಕಿ ಶ್ರಿನಿಧಿ ಶೆಟ್ಟಿ ಅಂದರೆ ರೀನಾ ಅವರ ಪಾತ್ರವೂ ಅಷ್ಟೇ ಪ್ರಮುಖವಾಗಿ ಗಮನ ಸೆಳೆಯುತ್ತದೆ.
ರಾಕಿಭಾಯ್ ಮನ ಕದ್ದು ಎರಡನೇ ಭಾಗದಲ್ಲಿ ರಾಕಿಭಾಯ್ ಹೆಂಡತಿ ಆಗಿ, ತಾನು ತಾಯಿ ಆಗಲಿದ್ದೇನೆ ಎಂದು ಹೇಳುವಾಗಲೇ ಗುಂಡೇಟಿಗೆ ಬಲಿಯಾಗುತ್ತಾರೆ. ಅಲ್ಲಿಗೆ ಅವರ ಪಾತ್ರ ಮುಗಿಯುತ್ತದೆ.
ಆದರೆ ರೀನಾ ಕೆಜಿಎಫ್ -3 ಯಲ್ಲೂ ಇರುತ್ತಾರ? ಅವರು ಇರಬೇಕೆಂದು ಅಭಿಮಾನಿಗಳ ಬಯಕೆ. ಶ್ರೀನಿಧಿ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಯೊಬ್ಬ ಕೆಜಿಎಫ್ -3 ನಲ್ಲಿ ನೀವು ಇರುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ಹಃಹಃ ನನಗೆ ನಿಜಕ್ಕೂ ಉತ್ತರ ಗೊತ್ತಿಲ್ಲ. ನಾವು ಮುಖ್ಯವ್ಯಕ್ತಿಯನ್ನೇ ಕೇಳಬೇಕು. ಅಂದರೆ ಪ್ರಶಾಂತ್ ನೀಲ್ ಅವರನ್ನು ಕೇಳಿ ತಿಳಿದುಕೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆಜಿಎಫ್ -3 ಬಗ್ಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿದ್ದು, ಮುಂದಿನ ಅಪ್ಡೇಟ್ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

