ರೋರಿಂಗ್ ಸ್ಟಾರ್ ಶ್ರೀಮುರಳಿ ‘ಉಗ್ರಂ’ ಬಳಿಕ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಜಾಗ್ರತೆಯಿಂದ ಒಂದೊಂದೇ ಹೆಜ್ಜೆಯನ್ನಿಟ್ಟು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಶ್ರೀಮುರಳಿ ಸದ್ಯ ‘ಬಘೀರ’ ಮೂಲಕ ಮತ್ತೊಂದು ದೊಡ್ಡ ಹಿಟ್ ಕೊಡಲು ರೆಡಿಯಾಗಿದ್ದಾರೆ.
ಸರಳ – ಸಜ್ಜನಿಕೆಯ ಶ್ರೀಮುರಳಿ ಅವರಿಗೆ ಅಭಿಮಾನ ವರ್ಗವೂ ದೊಡ್ಡದಿದೆ. ಫ್ಯಾನ್ಸ್ ಗಳು ರೋರಿಂಗ್ ಸ್ಟಾರ್ ನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಡಿ.17 ರಂದು ಶ್ರೀಮುರಳಿ ಅವರ ಹುಟ್ಟು ಹಬ್ಬವಿದೆ. ಕಳೆದ ಬಾರಿ ಬರ್ತ್ ಡೇ ಸೆಲೆಬ್ರಿಟ್ ಮಾಡದ ನಟ ಈ ಬಾರಿ ಸೆಲೆಬ್ರಿಟ್ ಮಾಡುತ್ತಾರ ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ.
ಅಭಿಮಾನಿಗಳು ಹುಟ್ಟು ಹಬ್ಬದ ಮುನ್ನವೇ ಕಾಮನ್ ಡಿಪಿಯಿಡುವ ಮೂಲಕ ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಕಾಮನ್ ಡಿಪಿಯಲ್ಲಿ ಮರವನ್ನು ಉಳಿಸುವ ಬಗ್ಗೆಯೂ ಹೇಳಲಾಗಿದೆ. ಕಾಮನ್ ಡಿಪಿ ಹಾಕುವ ಮೂಲಕ ಅಭಿಮಾನವನ್ನು ಮೆರೆಯುತ್ತಿದ್ದಾರೆ.
ಡಾ.ಸೂರಿ ನಿರ್ದೇಶನ ‘ಬಘೀರ’ ಸಿನಿಮಾಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

