ಡಾ.ಸೂರಿ ನಿರ್ದೇಶನ ಮಾಡುತ್ತಿರುವ ‘ಬಘೀರ’ ಸಿನಿಮಾದ ಅಂತಿಮ ಹಂತದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ .
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರುವ ‘ಬಘೀರ’ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ಚಿತ್ರಕಲೆಯಲ್ಲಿ ಬರುತ್ತಿರುವ ಇನ್ನೇನು ಎರಡು ದಿನದಲ್ಲಿ ಚಿತ್ರೀಕರಣ ಮುಗಿಯುವ ಹಾದಿಯಲ್ಲಿರುವಾಗಲೇ ಅವಘಡವೊಂದು ಸಂಭವಿಸಿದೆ.
ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ಆಗುತ್ತಿರುವ ಸಂದರ್ಭದಲ್ಲಿ ನಾಯಕ ನಟ ಶ್ರೀಮುರಳಿ ಅವರ ಮೊಣಕಾಲಿನ ಏಟು ಬಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಿ,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆಯೂ ಮಹೇಶ್ ಕುಮಾರ್ ಅವರ ‘ಮದಗಜ’ ಸಿನಿಮಾ ಚಿತ್ರೀಕರಣದ ವೇಳೆಯೂ ಶ್ರೀಮುರಳಿ ಅವರ ಎಡ ಕಾಲಿನ ಮೊಣಕಾಲಿಗೆ ಪೆಟ್ಟಾಗಿತ್ತು.ಇದೀಗ ಅದೇ ಕಾಲಿಗೆ ಏಟು ಬಿದ್ದಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

