ರೋರಿಂಗ್ ಸ್ಟಾರ್ ಅವರ ಬಹು ನಿರೀಕ್ಷಿತ ‘ಬಘೀರ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ‘ಲಕ್ಕಿ’ ಸಿನಿಮಾ ಖ್ಯಾತಿಯ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ.
ಖಡಕ್ ಪೊಲೀಸ್ ಅಧಿಕಾರಿಯಾಗಿ ಶ್ರೀಮುರುಳಿ ಕಾಣಿಸಿಕೊಳ್ಳಲಿದ್ದಾರೆ. ‘ಉಗ್ರಂ’ ಬಳಿಕ ಮತ್ತೆ ಪ್ರಶಾಂತ್ ನೀಲ್ ಅವರು ಶ್ರೀಮುರುಳಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಪ್ರಶಾಂತ್ ನೀಲ್ ‘ಬಘೀರ’ಕ್ಕೆ ಕಥೆ ಬರೆದಿದ್ದಾರೆ.
ಮೊದಲ ಪೋಸ್ಟರ್ ನಲ್ಲೇ ಮಿಂಚಿರುವ ‘ಬಘೀರ’ When society becomes a jungle.’ ಟ್ಯಾಗ್ ಲೈನ್ ನ್ನು ಹೊಂದಿದೆ.
ಸದ್ಯ ಮಂಗಳೂರಿನಲ್ಲಿ ಶೂಟ್ ನಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ. ಶ್ರೀಮುರುಳಿ ಸಿನಿಮಾ ಎಕ್ಸ್‌ಪ್ರೆಸ್ ಜೊತೆ ಮಾತಾನಾಡಿದ್ದಾರೆ.
25% ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನೂ ಸಾಗಲು ದಾರಿ ದೂರವಿದೆ. ನನ್ನ ಸಂಪೂರ್ಣ ಗಮನ ‘ಬಘೀರ’ ಮೇಲಿದೆ. ಮಂಗಳೂರಿನ ಚಿತ್ರೀಕರಣ ಮುಗಿದ ಬಳಿಕ, ನಾನು ಗೋವಾಕ್ಕೆ ತೆರಳಲಿದ್ದೇವೆ. ಅದಕ್ಕೂ ಮುನ್ನ ಸಣ್ಣ ವಿಶ್ರಾಂತಿ ಪಡೆದುಕೊಳ್ಳಲಿದ್ದೇವೆ. ಅ.29 ರಿಂದ ಗೋವಾದಲ್ಲಿ ಶೂಟ್ ಆರಂಭಿಸಲಿದ್ದೇವೆ” ಎಂದರು.

