HomeNewsಬಿಡುಗಡೆಯಾಯಿತು ಸೋನು ಸೂದ್ ನಟನೆಯ ಕನ್ನಡದ 'ಶ್ರೀಮಂತ' ಸಿನಿಮಾದ ಟ್ರೈಲರ್!

ಬಿಡುಗಡೆಯಾಯಿತು ಸೋನು ಸೂದ್ ನಟನೆಯ ಕನ್ನಡದ ‘ಶ್ರೀಮಂತ’ ಸಿನಿಮಾದ ಟ್ರೈಲರ್!

ಜಗತ್ತು ಎಷ್ಟೇ ಅನ್ವೇಷಣೆಗಳಿಂದ, ಎಷ್ಟೇ ವೈಭೋಗಗಳಿಂದ ಮುಂದುವರೆದರೂ ಎಲ್ಲರಿಗೂ ಮುಖ್ಯವಾಗಿರುವ ವ್ಯಕ್ತಿ ರೈತನೇ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ರೈತನ ಮಹತ್ವವನ್ನ ಸಾರುವ ಜೊತೆಗೇ ಅವನ ಬದುಕು, ಬವಣೆ ಸ್ನೇಹ ಪ್ರೀತಿ ಬಾಂಧವ್ಯಗಳ ಬಗೆಗೆ ಸಾರುವ ಸಿನಿಮಾ ‘ಶ್ರೀಮಂತ’. ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ನಾರಾಯಣಪ್ಪ, ಸಂಜಯ್ ಬಾಬು ಹಾಗು ನಿರ್ದೇಶಕ ಹಾಸನ್ ರಮೇಶ್ ಅವರು ಸೇರಿ ‘ಶ್ರೀಮಂತ’ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ ಹಾಸನ್ ರಮೇಶ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಉತ್ತರ ಭಾರತದ ಖ್ಯಾತ ನಟ ಸೋನು ಸೂದ್ ಅವರು ಕೂಡ ನಟಿಸಿದ್ದಾರೆ.

ಸೋನು ಸೂದ್ ಅವರು ಈ ಸಿನಿಮಾದಲ್ಲಿ ರೈತನಾಗಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. ಚಿತ್ರದಲ್ಲಿನ ಅವರ ಪಾತ್ರ ಚಿಕ್ಕದೇ ಆದರೂ ಇಡೀ ಸಿನಿಮಾದಲ್ಲಿರುವಂತಹ ಮುಖ್ಯ ಪಾತ್ರ ಇವರದ್ದು. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸನ್ ರಮೇಶ್ ಅವರು, “ಹಣ ಇರುವವರಷ್ಟೇ ಶ್ರೀಮಂತರಲ್ಲ. ನಿಜವಾದ ಶ್ರೀಮಂತನೆಂದರೆ ರೈತನೇ. ರೈತ ಕೇವಲ ಒಬ್ಬ ವ್ಯಕ್ತಿಯಾಗದೆ, ಆತ ಒಂದು ಶಕ್ತಿ. ನಮ್ಮ ದೇಶಕದಲ್ಲಿ 80ಶೇಖಡದಷ್ಟು ರೈತರೇ ಇದ್ದಾರೆ.

ಅವರೆಲ್ಲರದ್ದು ಉತ್ತಮ ಸಂಭ್ರಮದ ಬದುಕು. ಇಂತದ್ದೇ ಆಲೋಚನೆ ಇಟ್ಟುಕೊಂಡು ಮಾಡಿದ ಸಿನಿಮಾ ‘ಶ್ರೀಮಂತ’. ನೋಡುಗರಿಗೆ ಬೇಕಾದ ಎಲ್ಲಾ ಮನರಂಜನಾತ್ಮಕ ಅಂಶಗಳು ನಮ್ಮ ಸಿನಿಮಾದಲ್ಲಿವೆ. ‘ನಾದಬ್ರಹ್ಮ’ ಹಂಸಲೇಖ ಅವರ ಸಂಗೀತವಿರುವ ಒಟ್ಟು 8 ಹಾಡುಗಳಿದ್ದು, ಅವುಗಳ ಜೊತೆಗೇ ಗಾದೆ ಝೆಡ್ ಒಗಟು ಹೀಗೆ ಹಲವು ಅಂಶಗಳಿವೆ. ಹಳ್ಳಿಯಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಹೀರೋಯಿನ್ ಪಾತ್ರ ನಮ್ಮ ಚಿತ್ರದಲ್ಲಿದೆ” ಎಂದರು.

ಯುವನಟ ಕ್ರಾಂತಿ ಅವರು ಕಥಾನಾಯಕರಾದರೆ, ಇಬ್ಬರು ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟುವರ್ಧನ್ ಹಾಗು ವೈಷ್ಣವಿ ಚಂದ್ರನ್ ಮೆನನ್ ಅಭಿನಯಿಸಿದ್ದಾರೆ. ಇವರಷ್ಟೇ ಅಲ್ಲದೇ ಸಾಧು ಕೋಕಿಲ, ಚರಣ್ ರಾಜ್, ರಮೇಶ್ ಭಟ್, ಕುರಿ ರಂಗ, ಹಿರಿಯ ನಟಿ ಕಲ್ಯಾಣಿ ಮುಂತಾದ ಮೇರು ನಟರು ಸಿನಿಮಾದಲ್ಲಿದ್ದಾರೆ. ‘ನಾದಬ್ರಹ್ಮ’ ಹಂಸಲೇಖ ಅವರ ಸಂಗೀತ ನಿರ್ದೇಶನದ ಎಂಟು ಹಾಡುಗಳು ಚಿತ್ರದಲ್ಲಿದ್ದು, ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕೊನೆಯ ಹಾಡು ಕೂಡ ಇದೆ ಚಿತ್ರದಲ್ಲಿದೆ. ಕೆ ಎಂ ವಿಷ್ಣುವರ್ಧನ್ ಹಾಗು ರವಿಕುಮಾರ್ ಸನಾ ಅವರ ಛಾಯಾಗ್ರಾಹಣ, ಮಾಸ್ ಮಾದ ಸಾಹಸ, ಮದನ್ ಹರಿಣಿ ಹಾಗು ಮೋಹನ್ ಅವರ ನೃತ್ಯ ಜೊತೆಗೇ ಕೆ ಎ ಪ್ರಕಾಶ್ ಅವರ ಸಂಕಲನ ಸಿನಿಮಾದಲ್ಲಿದೆ.

RELATED ARTICLES

Most Popular

Share via
Copy link
Powered by Social Snap