ಸ್ಯಾಂಡಲ್ ವುಡ್ ನಲ್ಲಿ ವರ್ಷದಲ್ಲಿ ವಿಭಿನ್ನವಾದ ಕಂಟೆಂಟ್ ಗಳ್ಳುಳ ಸಿನಿಮಾಗಳು ಬರುತ್ತವೆ. ಈಗ ಈ ಸಾಲಿಗೆ ಸೇರಿದೆ ‘ಸೌತ್ ಇಂಡಿಯನ್ ಹೀರೋ’ ಸಿನಿಮಾ.
ಈ ಹಿಂದೆ ‘ಫಸ್ಟ್ Rank ರಾಜು’, ‘ರಾಜು ಕನ್ನಡ ಮೀಡಿಯಂ’ ಸಿನಿಮಾವನ್ನು ಗಮನ ಸೆಳೆದಿದ್ದ ನರೇಶ್ ಈಗ ‘ಸೌತ್ ಇಂಡಿಯನ್ ಹೀರೋ’ ಎಂಬ ಟೈಟಲ್ ಇಟ್ಟುಕೊಂಡು ಹೊಸ ಪ್ರತಿಭೆಗಳ ಮೂಲಕ ಹೊಸ ಬಗೆಯ ಕಥೆಯನ್ನು ಹೇಳೋಕೆ ಹೊರಟಿದ್ದಾರೆ.


ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಕಾಮಿಡಿ ಹಾಗೂ ಆ್ಯಕ್ಷನ್ ದೃಶ್ಯಗಳನ್ನು ಹೊಂದಿರುವ ಟೀಸರ್ ನಲ್ಲಿ ಕಥೆಯಲ್ಲಿ ಒಂದು ತಿರುವಿದೆ, ಪ್ರೇಮ ಕಥೆಯಿದೆ ಎನ್ನುವುದನ್ನು ತೋರಿಸಿದ್ದಾರೆ.
ನವ ನಟ ಸಾರ್ಥಕ್ ಡೈಲಾಗ್ಸ್ ಹಾಗೂ ಮಾಸ್ ಲುಕ್ ನಲ್ಲಿ ಇಲ್ಲಿ ಗಮನ ಸೆಳೆಯುತ್ತಾರೆ.


ಚಿತ್ರದಲ್ಲಿ ಊರ್ವಶಿ ಹಾಗೂ ಕಶಿಮಾ ಇಬ್ಬರು ನಾಯಕಿಯರು ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ 45 ದಿನಗಳ ಕಾಲ ಹಂಪಿ, ಬೆಂಗಳೂರು,ಕಾಶ್ಮೀರ್, ಲಡಾಕ್ ನಡೆಸಲಾಗಿದೆ.
ಚಿತ್ರಕ್ಕೆ ಹರ್ಷವರ್ಧನ್ ರಾಜ್ ಹಾಗೂ ಅನಿಲ್ ಸಿ.ಜೆ ಸಂಗೀತ ಕೊಟ್ಟಿದ್ದಾರೆ. ನವೆಂಬರ್ ನಲ್ಲಿ ಚಿತ್ರ ರಿಲೀಸ್ ಮಾಡುವ ಸಾಧ್ಯತೆಯಿದೆ.

