HomeNewsಸಂಪೂರ್ಣ ಸೌತ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಗುತ್ತಿದ್ದಾನೆ 'ಸೌತ್ ಇಂಡಿಯನ್ ಹೀರೋ'!

ಸಂಪೂರ್ಣ ಸೌತ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಗುತ್ತಿದ್ದಾನೆ ‘ಸೌತ್ ಇಂಡಿಯನ್ ಹೀರೋ’!

ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ಯ ಎಲ್ಲಾ ಚಿತ್ರರಂಗಗಳಲ್ಲಿ ಎಲ್ಲರ ಗಮನಸೆಳೆಯುತ್ತಿರುವ ವಿಚಾರ. ಪ್ರಾಯಷಃ ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳಾಗೆ ಹೊರಹೊಮ್ಮುತ್ತಿವೆ. ಇದರ ನಡುವೆ ಒಂದಿಷ್ಟು ಹೊಸಬರದ್ದು, ತೀವ್ರ ಬೆಳಕಿಗೆ ಬರದಿರುವಂತಹ ಕಲಾವಿದರ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಹಾದಿ ಹಿಡಿದು ಯಶಸ್ವಿಯಾದ ಉದಾಹರಣೆ ಕೂಡ ನಮ್ಮ ಮುಂದಿವೆ. ಈ ಸಾಲಿಗೆ ನಮ್ಮ ಕನ್ನಡ ಚಿತ್ರರಂಗದ ಹೊಸ ಸಿನಿಮಾವೊಂದು ಸೇರುತ್ತಿದೆ. ಅದುವೇ ‘ಸೌತ್ ಇಂಡಿಯನ್ ಹೀರೋ’ ಸಿನಿಮಾ. ಹೆಸರಿಗೆ ತಕ್ಕ ಹಾಗೆ ಎಲ್ಲಾ ಸೌತ್ ಇಂಡಿಯನ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.

‘ಸೌತ್ ಇಂಡಿಯನ್ ಹೀರೋ’ ಸಿನಿಮಾದ ಕನ್ನಡದ ಮೂಲ ಆವೃತ್ತಿ ಇದೆ ಫೆಬ್ರವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ‘ಫರ್ಸ್ಟ್ ರಾಂಕ್ ರಾಜು’,’ರಾಜು ಕನ್ನಡ ಮೀಡಿಯಂ’ ನಂತಹ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿರುವಂತಹ ನಿರ್ದೇಶಕರಾದ ನರೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಸಾರ್ಥಕ್ ಲಕ್ಕಿ, ಅಶ್ವಿನ್ ಪಲ್ಲಕ್ಕಿ, ಕಾಶಿಮ ರಫಿ, ಊರ್ವಶಿ ಜಯನ್, ವಿಜಯ್ ಚೆಂಡೂರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಶಿಲ್ಪಾ ಎಲ್ ಎಸ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನೇನು ಬಿಡುಗಡೆಗೆ ಹತ್ತಿರವಾಗುತ್ತಿರುವ ಹೊತ್ತಿಗೆ ಚಿತ್ರತಂಡ ಹೈದರಾಬಾದ್ ಹಾಗು ಚೆನ್ನೈ ನಲ್ಲಿ ಹೊರರಾಜ್ಯದ ಸಿನಿಮಾ ವಿತರಕರಿಗೆ, ನಿರ್ಮಾಕರಿಗಾಗಿ ಚಿತ್ರದ ಪ್ರದರ್ಶನಕ್ಕೆ ಸಜ್ಜು ಮಾಡಿದ್ದಾರೆ. ಈ ಸಮಯದಲ್ಲಿ ಸಿನಿಮಾ ಕಂಡು ಅದರ ಒಳಗಿನ ವಿಚಾರವನ್ನ ಮನತುಂಬಿ ಇಷ್ಟ ಪಟ್ಟಂತಹ ‘ಕ್ರಿಯೇಟಿವ್ ಸಿನಿಮಾಸ್’ ಎಂಬ ಪ್ರೊಡಕ್ಷನ್ ಕಂಪನಿ ಸಿನಿಮಾವನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳಿಗೂ ಡಬ್ ಮಾಡಲು ಮುಂದೆ ಬಂದಿದ್ದಾರೆ. ಸಿನಿಮಾ ತಂಡದಿಂದ ಹಕ್ಕುಗಳನ್ನ ಕೊಂಡುಕೊಂಡು ಇನ್ನೇನು ಕೆಲವೇ ದಿನಗಳಲ್ಲಿ ಡಬ್ ಚಟುವಟಿಕೆ ಪ್ರಾರಂಭಿಸಲಿದ್ದಾರೆ. ಚಿತ್ರದ ಕನ್ನಡ ಆವೃತ್ತಿ ಇದೆ ಫೆಬ್ರವರಿ 24ರಂದು ಬಿಡುಗಡೆಯಾದರೆ, ಉಳಿದ ಭಾಷೆಗಳಾದ ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳ ಆವೃತ್ತಿಗಳು ಅತೀ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.

ಒಟ್ಟಿನಲ್ಲಿ ಕನ್ನಡದ ಒಂದು ಸಿನಿಮಾಗೆ ಹೊರರಾಜ್ಯಗಳಲ್ಲೂ ಬೇಡಿಕೆ ಹುಟ್ಟುತ್ತಿರುವುದು ಸಂತಸದ ವಿಚಾರವೇ ಸರಿ. ಇದೆ ಫೆಬ್ರವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ‘ಸೌತ್ ಇಂಡಿಯನ್ ಹೀರೋ’ ಸಿನಿಮಾ ಒಳ್ಳೆ ಮಟ್ಟದ ಯಶಸ್ಸನ್ನು ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯಲಿ ಎಂಬುದೇ ನಮ್ಮಾಸೆ.

RELATED ARTICLES

Most Popular

Share via
Copy link
Powered by Social Snap