ಬಾಲಿವುಡ್ ನಟ ಸೋನ್ ಸೂದ್ ಅನೇಕ ಜೀವಗಳ ಪಾಲಿಗೆ ದೇವರು.ಅವರು ಕೋವಿಡ್ ವೇಳೆ ಮಾಡಿದ ಸಹಾಯವನ್ನು ನೆನೆದು ಇಂದಿಗೂ ಅವರನ್ನು ದೇವರಾಗಿ ಪೂಜಿಸುವವರಿದ್ದಾರೆ.
ಬಡವರಿಗೆ ರೇಷನ್, ಸೋತವರಿಗೆ ಧೈರ್ಯ,ಹಸಿದವರಿಗೆ ಅನ್ನ, ಮನೆ ಕಳೆದುಕೊಂಡುವವರಿಗೆ ಸೂರು ಹೀಗೆ ಅವರ ಸಹಾಯಕ್ಕಡ ಕೊನೆಯೇ ಇಲ್ಲ.


ಇಂತಹ ರಿಯಲ್ ಲೈಫ್ ಹೀರೋ ಸೋನ್ ಸೂದ್ ಅವರಿಗೆ ‘ಟಗರು’ ಬೆಡಗಿ ಮಾನ್ವಿತಾ ಅವರು ಧನ್ಯವಾದ ಹೇಳಿದ್ದಾರೆ. ಅದಕ್ಕೊಂದು ಕಾರಣವೂ ಇದೆ.
ಇತ್ತೀಚೆಗೆ ಮಾನ್ಚಿತಾ ಅವರ ತಾಯಿಗೆ ಅನಾರೋಗ್ಯ ಉಂಟಾಗಿತ್ತು.
ತಾಯಿಗೆ ಕಿಡ್ನಿ ಸಮಸ್ಯೆ ಆಗಿತ್ತು. ಚಿಕಿತ್ಸೆಗಾಗಿ ಒಳ್ಳೆಯ ವೈದ್ಯರನ್ನು ಸಲಹೆ ನೀಡಿ ಎಂದು ಅವರು ಪೋಸ್ಟ್ ಮಾಡಿಕೊಂಡಿದ್ದರು. ಇದನ ಸೋನ್ ಸೂದ್ ಫೌಂಡೇಷನ್ ಗಮನಿಸಿತ್ತು. ಆ ವೇಳೆಯೇ ಸೋನ್ ಸೂದ್ ಫೌಂಡೇಷನ್ ನೆರವನ್ನು ನೀಡುವುದಾಗಿ ಭರವಸೆ ಕೊಟ್ಟಿತ್ತು. ಆ ಭರವಸೆ ಈಡೇರಿಸಿದೆ. ಕಿಡ್ನಿ ಕಸಿಗೆ ಫೌಂಡೇಷನ್ ನೆರವನ್ನು ನೀಡಿದೆ.
ಈ ಸಹಾಯವನ್ನು ನೆನೆದು ನಟಿ ಮಾನ್ವಿತಾ ಸೋನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈಗತಾನೇ ಸೋನು ಸೂದ್ ಅವರ ಜತೆ ಮಾತನಾಡಿದೆ. ನನ್ನ ತಾಯಿಗೆ ಅವರು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ. ನೀವು ನಿಜವಾದ ಹೀರೋ ಸರ್. ಎಲ್ಲದಕ್ಕೂ ಧನ್ಯವಾದ’ ಎಂದಿದ್ದಾರೆ ಮಾನ್ವಿತಾ ಕಾಮತ್. ‘ನಮ್ಮ ಸಂಕಷ್ಟದಲ್ಲಿ ಏಂಜಲ್ ರೀತಿ ಬಂದಿರಿ. ನಿಮ್ಮಿಂದಾಗಿ ನನ್ನ ತಾಯಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾನ್ವಿತಾ ಬರೆದುಕೊಂಡಿದ್ದಾರೆ.
ಈ ವಾರ ಮಾನ್ವಿತಾ ನಟನೆಯ ‘ಶಿವ143’ ಚಿತ್ರ ತೆರೆಗೆ ಬಂದಿದೆ.

