ಚಂದನವನದ ‘ತುಪ್ಪದ ಬೆಡಗಿ’ ಎಂದೇ ಖ್ಯಾತರಾಗಿರುವವರು ರಾಗಿಣಿ ದ್ವಿವೇದಿ. ಸಿನಿಮಾಗಳಲ್ಲಿ ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸುವುದರ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದವರು ಇವರು. ತಮ್ಮ ಡಾನ್ಸ್, ಗ್ಲಾಮರ್ ನ ಮೂಲಕವೇ ಜನಪ್ರಿಯತೆ ಪಡೆದಿರುವ ರಾಗಿಣಿ ಇತ್ತೀಚೆಗೆ ಚಿತ್ರರಂಗದಿಂದ ದೂರ ಉಳಿದರೇ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಸದ್ಯ ರಾಗಿಣಿ ದ್ವಿವೇದಿ ಕನ್ನಡದ ಹೊಸ ಆಲ್ಬಮ್ ಸಾಂಗ್ ಒಂದರ ಮೂಲಕ ಮರಳಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಅದುವೇ ‘ಸೋನೇಯಹ್’ ಹಾಡಿನ ಮೂಲಕ.
‘ಸೋನೇಯಹ್’ ಹಾಡು ಇಂದು(ಫೆಬ್ರವರಿ 14) ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಕ್ವಾಕ್ ಹಾಗು ಮಾರ್ಟೀನ್ ಯೊ ಅವರ ಸಾಹಿತ್ಯ ಇರುವ ಈ ಹಾಡು ಆದಿ ಧರ್ ಅವರ ಸಂಗೀತ ಹೊಂದಿದೆ. ತುಪ್ಪದ ಬೆಡಗಿ ರಾಗಿಣಿ ಅವರನ್ನು ಇನ್ನಷ್ಟು ಗ್ಲಾಮರಸ್ ಆಗಿ ಈ ಹಾಡಿನಲ್ಲಿ ತೋರಿಸಲಾಗಿದ್ದು, ಸದ್ಯ ಈ ಹಾಡು ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಶ್ರೀಕಾಂತ್ ಕೆ ಪಿ ಅವರ ‘ವೀನಸ್ ಎಂಟರ್ಟೈನ್ಮೆಂಟ್’ ಈ ಹಾಡನ್ನು ನಿರ್ಮಾಣ ಮಾಡಿದ್ದು, ವಿಶು ದೇವ ಅವರು ನಿರ್ದೇಶನ ಮಾಡಿದ್ದಾರೆ.
ಮಾರ್ಟೀನ್ ಯೊ ಹಾಗು ಕ್ವಾಕ್ ಅವರ ಸಾಹಿತ್ಯ ಹಾಗು ರಾಪ್ ಜನರ ಮನಸೆಳೆದಿದ್ದು ರಾಗಿಣಿ ಅವರ ನೃತ್ಯ ಹಾಗು ನಟನೆ ಪ್ರೇಕ್ಷಕರನ್ನ ಸೆಳೆಯುತ್ತಿದೆ. ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿರುವ ಈ ಹಾಡು ಬಿರುಸಿನ ಜನಪ್ರಿಯತೆ ಪಡೆಯುತ್ತಿದೆ.

