ಸೈಮಾ ಅವಾಡ್ಸ್ ಗೆ ಕನ್ನಡದ ಮೂರು ಚಿತ್ರಗಳು ನಾಮಿನೇಟ್: ಪ್ರಮುಖ ನಾಮಿನೇಟ್ ಪಟ್ಟಿ ಇಲ್ಲಿದೆ
ಬೆಂಗಳೂರು: ʼಸೈಮಾ ಆವಾರ್ಡ್ಸ್ 2021ʼ ನೇ ಸಾಲಿನ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಹಲವು ಸಿನಿಮಾಗಳು ವಿವಿಧ ವಿಭಾಗದಲ್ಲಿ ನಾಮಿನೇಟ್ ಆಗಿದೆ.
ಯುವರತ್ನ: ಕನ್ನಡದಲ್ಲಿ ಪ್ರಮುಖವಾಗಿ ಮೂರು ಚಿತ್ರಗಳ ನಾಮಿನೇಟ್ ಆಗಿವೆ. ಅವುಗಳೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಚಿತ್ರ ʼಯುವರತ್ನʼ, ಸಂತೋಷ್ ಆನಂದರಾಮ್ ನಿರ್ದೇಶನ ಮಾಡಿದ ಈ ಚಿತ್ರ ಸೈಮಾ ಅವಾರ್ಡ್ಸ್ ನಲ್ಲಿ 7 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.


ರಾಬರ್ಟ್: ʼರಾಬರ್ಟ್ʼ ನಲ್ಲಿ ದರ್ಶನ್, ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್ ನಲ್ಲಿ ತರುಣ್ ಸುಧೀರ್ ಅವರ ಚಿತ್ರ ಸಖತ್ ಸದ್ದು ಮಾಡಿತ್ತು. 2021 ರ ಸಾಲಿನ ಸೈಮಾ ಅವಾರ್ಡ್ಸ್ ನಲ್ಲಿ ಚಿತ್ರ 10 ವಿಭಾಗದಲ್ಲಿ ನಾಮಿನೇಟ್ ಆಗಿದೆ.
ಗರುಡ ಗಮನ ವೃಷಭ ವಾಹನ: ಮಂಗಳೂರು ಕನ್ನಡವನ್ನಿಟ್ಟುಕೊಂಡು ತೆರೆಗೆ ಬಂದ ರಾಜ್ .ಬಿ ಶೆಟ್ಟಿಯವರ ʼಗರುಡ ಗಮನ ವೃಷಭ ವಾಹನʼ ಪ್ರತಿಷ್ಠಿತ ಸೈಮಾದಲ್ಲಿ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಚಿತ್ರದಲ್ಲಿ ರಿಷಭ್ ಶೆಟ್ಟಿಯೂ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.
ತೆಲುಗು ಚಿತ್ರಗಳು : ʼಪುಷ್ಪಾʼ (ಬರೋಬ್ಬರಿ 12 ವಿಭಾಗದಲ್ಲಿ ನಾಮಿನೇಟ್ ) ʼಅಖಂಡʼ ( 10 ವಿಭಾಗದಲ್ಲಿ ನಾಮನಿರ್ದೇಶನ), ʼಜಾತಿ ರತ್ನಲುʼ (8 ವಿಭಾಗದಲ್ಲಿ ನಾಮಿನೇಟ್ ), ಕೃತಿ ಶೆಟ್ಟಿಯವರ ಚೊಚ್ಚಲ ʼಉಪ್ಪೇನʼ ಚಿತ್ರವೂ ಸೈಮಾದಲ್ಲಿ 8 ವಿಭಾಗದಲ್ಲಿ ನಾಮಿನೇಟ್ ಆಗಿದೆ.
ತಮಿಳು ಚಿತ್ರಗಳು : ಧನುಚ್ ಅವರ ಸೂಪರ್ ಹಿಟ್ ʼಕರ್ಣನ್ʼ ಚಿತ್ರ (10 ವಿಭಾಗದಲ್ಲಿ ನಾಮಿನೇಟ್) ʼಡಾಕ್ಟರ್ʼ (9 ವಿಭಾಗದಲ್ಲಿ ನಾಮಿನೇಟ್), ವಿಜಯ್ ಅವರ ʼಮಾಸ್ಟರ್ʼ (7 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ) ಇನ್ನು ಕಂಗನಾ ರಣಾವತ್ ಅವರ ʼತಲೈವಿʼ 7 ವಿಭಾಗದಲ್ಲಿ ನಾಮಿನೇಟ್ ಆಗಿದೆ.
ನಾಮಿನೇಟ್ ಆದ ಪ್ರಮುಖ ಮಲಯಾಳಂ ಚಿತ್ರಗಳು :
ಫಹಾದ್ ಪಾಸಿಲ್ ಅಭಿನಯದ ʼಜೋಜಿʼ( 6 ನಾಮಿನೇಟ್) ದುಲ್ಖರ್ ಅವರ ʼಕುರುಪ್ʼ(8 ನಾಮಿನೇಟ್), ಮಲ್ಲಿಕ್ (6 ನಾಮಿನೇಟ್), ಮಿನ್ನಲ್ ಮುರಳಿ (10 ನಾಮಿನೇಟ್)
ಈ ಬಾರಿಯ ಸೈಮಾ ಅವಾರ್ಡ್ಸ್ 10 ವರ್ಷವನ್ನು ಸಂಭ್ರಮಿಸುತ್ತಿದ್ದು, ಬೆಂಗಳೂರಿನಲ್ಲಿ ಸೆಪ್ಟೆಂಬರ್ 10,11 ರಂದು ನಡೆಯಲಿದೆ.

