ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬೃಹತ್ ಗುರಿಯನ್ನು ನೀಡಿದೆ. ಆರಂಭಿಕರಾಗಿ ಮೈದಾನಕ್ಕಿಳಿದ ಶುಭ್ಮನ್ ಗಿಲ್ ತನ್ನ ಚೊಚ್ಚಲ ದ್ವಿಶತಕದೊಂದಿದೆ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಇದುವರೆಗೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರವಾಗಿ ದ್ವಿಶತಕ ಸಿಡಿಸಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಬ್ಬ ಆಟಗಾರ ಸೇರಿದ್ದಾರೆ.
ಶುಭ್ಮನ್ ಗಿಲ್ 19 ಬೌಂಡರಿ,9 ಸಿಕ್ಸರ್ ಸಹಿತ 208 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಈ ದಾಖಲೆ ಸಿಡಿಸಿದ ಯುವ ಆಟಗಾರನೆಂಬ ಹೆಗ್ಗಳಿಕೆಯನ್ನು ಶುಭ್ಮನ್ ಗಿಲ್ ಪಡೆದುಕೊಂಡಿದ್ದಾರೆ.
ಮೊದಲು ಈ ದಾಖಲೆ ಇಶಾನ್ ಕಿಶನ್ ಅವರ ಹೆಸರಿನಲ್ಲಿತ್ತು.

