‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಹೀಗೊಂದು ಹೊಸಬರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾದ ಟ್ರೇಲರ್ ಡಿ.27 ರಂದು ಬಿಡುಗಡೆ ಆಗಿದೆ.
ಕಿರುತೆರೆಯಲ್ಲಿ ನಟನಾಗಿ ಗಮನ ಸೆಳೆದಿರುವ ರಾಜೇಶ್ ಧ್ರುವ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ನಿರ್ದೇಶದೊಂದಿಗೆ ಪ್ರಮುಖ ಪಾತ್ರದಲ್ಲಿ ಅವರು ನಟಿಸಿದ್ದಾರೆ.
ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣವಾಗಿರುವ ಸಿನಿಮಾದಲ್ಲಿ ಬಹುಪಾಲು ಉತ್ತರ ಕನ್ನಡ ಭಾಷೆಯೇ ಇದೆ. ಊರಿನಲ್ಲಿ ಒಬ್ಬ ಫೋಟೋಗ್ರಾಫರ್,ಕ್ಯಾಮರಾ ಹಾಗೂ ಆತನ ಸ್ಟುಡಿಯೋನೇ ಆತನ ಬದುಕಿವೆ ಆಸರೆ. ಈತನಿಗೆ ಸ್ಪರ್ಧಿಯಾಗಿ ಮತ್ತೊಬ್ಬ ಫೋಟೋಗ್ರಾಫರ್, ಈ ನಡುವೆ ಜಾಗದ ತಕರಾರು ಹೀಗೆ ಸಾಮಾನ್ಯವಾದ ಕಥೆಯನ್ನು ಸುಂದರ ಪರಿಸರ ಹಾಗೂ ಭಾಷೆಯಲ್ಲಿ ಕಟ್ಟಿ ಕೊಟ್ಟಿರುವುದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.


ನಡುವೆ ಟ್ರೇಲರ್ ಊರಿನ ಹಿರಿಯರು, ಮಾತುಕತೆ, ಸ್ನೇಹ, ಪ್ರೇಮದ ಕಥೆಯ ಝಳಕನ್ನೂ ತೋರಿಸಲಾಗಿದೆ.
ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಹಾಗೂ ಹಲವಾರು ಹೊಸ ಕಲಾವಿದರು ಕಾಣಿಸಿಕೊಂಡಿದ್ದಾರೆ.
ಇದೇ 2023 ರ ಜ.6 ರಂದು ಸಿನಿಮಾ ತೆರೆಗೆ ಬರಲಿದೆ.





