ʼಕ್ರಾಂತಿʼ ಸಿನಿಮಾದ ಆಡಿಯೋ ಬಿಡುಗಡೆ ವೇಳೆ ನಡೆದ ಕೃತ್ಯವನ್ನು ಚಂದನವನ ಕಲಾವಿದರು ಖಂಡಿಸಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ವಿಡಯೋ ಮಾಡಿ ದರ್ಶನ್ ಅವರ ಮೇಲೆ ನಡೆದ ಘಟನೆಯನ್ನು ಖಂಡಿಸಿದ್ದಾರೆ.
ನಿನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ ಎಂದಿದ್ದಾರೆ.
ಹೊಸಪೇಟೆಯಲ್ಲಿ ಆಡಿಯೋ ರಿಲೀಸ್ ವೇಳೆ ಯಾರೋ ಕಿಡಿಕೇಡಿಗಳು ದರ್ಶನ್ ಅವರಿಗೆ ಚಪ್ಪಲಿ ಎಸೆದಿದ್ದು . ತರಾತುರಿಯಲ್ಲಿ ಚಿತ್ರ ತಂಡ ಆಡಿಯೋ ಬಿಡುಗಡೆ ಮಾಡಿದೆ. ಕೆಲ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಲಾಠಿ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಸಿದ್ದಾರೆ.
ಇನ್ನು ನಿರ್ದೇಶಕ ಸಿಂಪಲ್ ಸುನಿ ಅವರು ಟ್ವೀಟ್ ಮಾಡಿದ್ದು, “ಕಲೆಗೆ ,, ಕಲಾವಿದರಿಗೆ ಗೌರವ ಕೊಡುವವರು ಮಾತ್ರ ಅಭಿಮಾನಿಯಾಗಲು ಸಾಧ್ಯ… ಈ ರೀತಿ ಮಾಡಿದವನು ಮನುಷ್ಯತ್ವ ಇಲ್ಲದವನು.. ಎಂದೆಂದಿಗೂ ಗೌರವದಿಂದ ಎಂದು ಬರೆದುಕೊಂಡಿದ್ದಾರೆ. ಇನ್ನು ನಟಿ ಮೇಘನಾ ಗಾಂವ್ಕಾರ್ ಅವರು ಕೂಡ ಘಟನೆಯನ್ನು ಖಂಡಿಸಿದ್ದಾರೆ.

