HomeNewsರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ರಿಷಬ್ ಶೆಟ್ಟಿ ‘ಕಾಂತಾರ’ದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಿಂದಿ – ತೆಲುಗಿನಲ್ಲೂ ‘ಕಾಂತಾರ’ ಭರ್ಜರಿ ಸದ್ದು ಮಾಡುತ್ತಿದೆ.

ನಟನೆ, ನಿರ್ದೇಶನದೊಂದಿಗೆ ರಿಷಬ್ ಶೆಟ್ಟಿ ನಿರ್ಮಾಣದಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲ್ಮಂಸ್ ಮೂಲಕ ಕಿರುಚಿತ್ರ, ಸಿನಿಮಾಗಳಿಗೆ ರಿಷಬ್ ಬಂಡವಾಳ ಹಾಕಿದ್ದಾರೆ.

ಈ ಹಿಂದೆ ‘ಪೆಡ್ರೋ’ ಎನ್ನುವ ಸಿನಿಮಾ ನಿರ್ಮಾಣ ಮಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಸಿನಿಮಾ ಸುದ್ದಿ ಮಾಡಿತ್ತು.

ಜೈ ಶಂಕರ್ ಆರ್ಯರ್ ನಿರ್ದೇಶನ ಮಾಡಿರುವ ‘ಶಿವಮ್ಮ’ ಸಿನಿಮಾಕ್ಕೆ ರಿಷಬ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೆ 2022 ನೇ ಸಾಲಿನ ಬೂಸನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಲಭಿಸಿದೆ.

ಬಡ ಹೆಂಗಸೊಬ್ಬಳು ಪಾನೀಯದ ಕಂಪೆನಿಗೆ ಮಾರಾಟ ಪ್ರತಿನಿಧಿಯಾಗಿ ಅನುಭವಿಸುವ ಕಥನ ಈ ಸಿನಿಮಾದಲ್ಲಿದೆ.

ಶರಣಮ್ಮ ಛೆಟ್ಟಿ, ಚೆನ್ನಮ್ಮ ಅಬ್ಬೆಗೆರೆ ಈ ಸಿನಿಮಾದಲ್ಲಿ ನಟಿಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap