ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ, ಎಡಗೈಯ ಬ್ಯಾಟ್ಸಮನ್ ಶಿಖರ್ ಧವನ್ ಅವರು ಎಲ್ಲರಿಗೂ ಪರಿಚಿತರು. ಆರಂಭಿಕ ಆಟಗಾರನಾಗಿ ತಂಡದ ಪರ ಕಣಕ್ಕಿಳಿಯುತ್ತಿದ್ದ ಇವರು ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದವರು. ಕೆಲವೇ ಕೆಲವು ನೀರಸ ಬ್ಯಾಟಿಂಗ್ ಹಾಗು ತಮ್ಮ ಯುವ ಜೂನಿಯರ್ ಗಳ ಪ್ರಭುದ್ಧ ಪ್ರದರ್ಶನಗಳ ಕಾರಣದಿಂದಾಗಿ, ಅನುಭವಿ ಆಟಗಾರ ‘ಗಬ್ಬರ್’ ಸದ್ಯ ತಂಡದಿಂದ ದೂರ ಉಳಿದಿದ್ದಾರೆ. ತಮ್ಮ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿರುವ ಶಿಖರ್ ಅಭ್ಯಾಸವನ್ನಂತೂ ಮರೆತಿಲ್ಲ. ಜೊತೆಗೆ ತಮ್ಮ ಫಿಟ್ನೆಸ್ ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.


ಸದ್ಯ ಶಿಖರ್ ಧವನ್ ಅವರು ತಮ್ಮ ಫಿಟ್ನೆಸ್ ನ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ದೇಹದ ಕಸರತ್ತು ನಡೆಸುತ್ತ, ತಮ್ಮ ಮನೆಯ ಪಾರ್ಕ್ ಹಾಗು ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ಅಲ್ಲದೇ ತಮ್ಮ ದೈಹಿಕ ಕಸರತ್ತಿನ ವಿಡಿಯೋವನ್ನೂ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಗಬ್ಬರ್ ಹಂಚಿಕೊಂಡಿದ್ದು, ಅದರಲ್ಲಿ ನಾನು ಫಿಟ್ನೆಸ್ ಗೆ ಸದಾ ಸಿದ್ಧ ಎಂದೂ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇನ್ನೇನು ಏಷ್ಯಾ ಕಪ್ ಹಾಗು ವಿಶ್ವಕಪ್ ಗಳು ಸನ್ನಿತವಾಗುತ್ತಿರುವ ಕಾಲದಲ್ಲಿ, ಗಬ್ಬರ್ ಟೀಂ ಇಂಡಿಯಾಗೆ ಮರಳುವ ನಿರೀಕ್ಷೆಯಲ್ಲಿ ಉತ್ತಮ ಪರಿಶ್ರಮ ಪಡುತ್ತಿದ್ದಾರೆ.

