ನಟ ಶರಣ್ ಮತ್ತೊಂದು ಹಾರಾರ್ ಕಾಮಿಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಾಣದ ‘ಛೂ ಮಂತರ್’ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ.
ಇದೊಂದು ಹಾರಾರ್ ಕಾಮಿಡಿ ಕಥಾ ಹಂದರವುಳ್ಳ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ ಬಹು ತಾರಾಗಣ ಇದೆ. ಶರಣ್ – ಚಿಕ್ಕಣ್ಣನವರ ಕಾಮಿಡಿ ಇದರೊಂದಿಗೆ ಅದಿತಿ ಪ್ರಭುದೇವ, ಮೇಘನಾ ಗಾಂವ್ಕಾರ್ ಮುಂತಾದ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕರ್ವ ನವನೀತ್ ಈ ಸಿನಿಮಾವನ್ನು ನಿರ್ದೇಶನದ ಮಾಡಲಿದ್ದಾರೆ. ಅನೂಪ್ ಜೆ ಕಾಟ್ ಛಾಯಾಗ್ರಹಣ ಮಾಡಲಿದ್ದಾರೆ.

