ಶರಣ್ ಅವರ ‘ಗುರು ಶಿಷ್ಯರು’ ಸ್ಯಾಂಡಲ್ ವುಡ್ ಸದ್ದು ಮಾಡಿತ್ತು. ದೈಹಿಕ ಶಿಕ್ಷಕನಾಗಿನಾಗಿ ತೆರೆ ಮೇಲೆ ಬಂದ ಶರಣ್ ಹಾಸ್ಯ ಹಾಗೂ ಗಂಭೀರ ಎರಡೂ ಶೇಡ್ ನಲ್ಲೂ ಹಳ್ಳಿ ಮೇಸ್ಟ್ರ ಲುಕ್ ನಲ್ಲಿ ಮಿಂಚಿದ್ದರು.
‘ಗುರು ಶಿಷ್ಯರು’ ಶರಣ್ ‘ಛೂ ಮಂತರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಕರ್ವ ನವನೀತ್ ಅವರು ನಿರ್ದೇಶನ ಮಾಡಲಿದ್ದಾರೆ.
ಈ ನಡುವೆ ನಟ ಶರಣ್ ತಾವು ಕಲಿತ ಶಾಲೆಗೆ ಭೇಟಿ ನೀಡಿ ಒಂದಷ್ಟು ಸಮಯ ಹಳೆದ ಕ್ಷಣಗಳನ್ನು ಕಳೆದಿದ್ದಾರೆ. ಈ ಸುಂದರ ಕ್ಷಣಗಳನ್ನು ನೆನೆಯುವ ವೇಳೆ ಶರಣ್ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿಯ ಎಸ್ ಡಿ ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಶರಣ್, ಆ ಶಾಲೆಗೆ ಭೇಟಿ ನೀಡಿದ್ದಾರೆ.
“ಹುಬ್ಬಳ್ಳಿಗೆ ಹೋಗಿದ್ದಾಗ ನನ್ನ ಬಾಲ್ಯ ದಿನದ ಶಾಲೆಯೊಂದಿಗೆ ಭೇಟಿ ನೀಡಿದ್ದೆ… ಆಶ್ಚರ್ಯ ಏನೆಂದರೆ ಅಲ್ಲಿನ ಆಂತರಿಕ ನೋಟ, ಗಾಳಿಯ ಸೊಬಗು, ನಾನು ಕೂತಿರುವ ನನ್ನ ಒಂದನೇ ತರಗತಿಯ ಕೊಠಡಿ, ಎಲ್ಲಾ ಹಾಗೆಯೇ ಉಂಟು” ಎಂದು ಬರೆದುಕೊಂಡು ಬಾಲ್ಯದ ಕ್ಷಣಗಳನ್ನು ತಾಜಾ ಮಾಡಿಕೊಂಡಿದ್ದಾರೆ.

