ಹೊಸ ತಂಡದ ʼಶರʼ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ನಡೆಯಿತು.
ಪ್ರಕಾಶ್ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರವನ್ನು ಡ್ರೀಮ್ಸ್ ಕ್ಯಾಪ್ಚರ್ ಮೂವಿ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ.
ಚಿತ್ರಕ್ಕೆ “ಶರ” ಎಂದು ಶೀರ್ಷಿಕೆ ಇಟ್ಟಿದ್ದು. “ಶರ” ಚಿತ್ರಕ್ಕೆ “ತಾಯಿಯಿಂದ ಜನನ, ಪ್ರೇಯಸಿಯಿಂದ ಮರಣ” ಎಂಬ ಅಡಿಬರಹವಿದೆ.
ಕ್ರಿಯೇಟಿವ್ ಹೆಡ್ ಆಗಿ ಮುರಳಿ S Y. ಬೆಂಬಲ ನೀಡುತ್ತಿದ್ದಾರೆ. ಸಹ ನಿರ್ಮಾಪಕರಾಗಿ ಸುನಿಲ್ ಎಂ, H M ಹರೀಶ್ ಗೌಡ್ರು,ಮಂಜುನಾಥ್ ಎಸ್ ಪಿ ಇದ್ದಾರೆ.
ಪ್ರಶಾಂತ ಜೈ ನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ರಕ್ಷಾ ಡಿ.ಎನ್ ಹಾಗೂ ಲಾವಣ್ಯ ಈ ಚಿತ್ರದ ನಾಯಕಿಯರು. ಅಭಿಷೇಕ್ ಸಂಗೀತ ನಿರ್ದೇಶನ ಹಾಗೂ ಸಾಮ್ರಾಟ್ ನಾಗರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹಂಚಿನ ಸಿದ್ದಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಸಜ್ಜಾಗಿದೆ.

