ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಶಾನುಭೋಗರ ಮಗಳು’ ಚಿತ್ರಕ್ಕೆ ಮತ್ತೊಂದು ಹೊಸ ಪಾತ್ರದ ಎಂಟ್ರಿಯಾಗಿದೆ.
ಈ ಚಿತ್ರ ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಮೇಲೆ ಆಧಾರಿತ ಸಿನಿಮಾ. ಈ ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಬಹುಭಾಷಾ ನಟ ಕಿಶೋರ್ ಅವರ ಎಂಟ್ರಿ ಆಗಿದ್ದು, ಅವರು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ 5ರ ವಿಜಯದಶಮಿ ಶುಭದಿನದಂದು ಚನ್ನಪಟ್ಟಣದ ಅರಳಾಳು ಸಂದ್ರದಲ್ಲಿ
ಆರಂಭವಾಗಲಿದೆ. ಆನಂತರ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟ, ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಈ ಸಿನಿಮಾದಲ್ಲಿ ಮೇಘಶ್ರೀ, ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ಭಾಗ್ಯಶ್ರೀ,ಟಿ.ಎನ್.ಶ್ರೀನಿವಾಸಮೂರ್ತಿ, ಟೆನ್ನಿಸ್ ಕೃಷ್ಣ ಮುಂತಾದವರು ನಟಿಸಿದ್ದಾರೆ.

