HomeOther Languageನಾವಿಬ್ಬರೂ ಇನ್ಮುಂದೆ ಒಟ್ಟಿಗೆ ಇರುವುದಿಲ್ಲ: ಬ್ರೇಕಪ್ ಮಾಡಿಕೊಂಡ‌ ಬಿಟೌನ್ ಸ್ಟಾರ್ ಜೋಡಿ

ನಾವಿಬ್ಬರೂ ಇನ್ಮುಂದೆ ಒಟ್ಟಿಗೆ ಇರುವುದಿಲ್ಲ: ಬ್ರೇಕಪ್ ಮಾಡಿಕೊಂಡ‌ ಬಿಟೌನ್ ಸ್ಟಾರ್ ಜೋಡಿ

ಸ್ಟಾರ್ ಜೋಡಿಗಳು‌‌ ದೂರವಾಗುವುದು ಇತ್ತೀಚಿನ ದಿನಗಳಲ್ಲಿ ಸಿನಿರಂಗದಲ್ಲಿ‌ ಸಾಮಾನ್ಯವಾಗಿದೆ.


ಬಾಲಿವುಡ್ ನಲ್ಲಿ ಮತ್ತೊಂದು ಬ್ರೇಕಪ್ ಸುದ್ದಿ ಅಧಿಕೃತವಾಗಿ ಹೊರ ಬಿದ್ದಿದೆ. ಕೆಲ ದಿನಗಳ ಹಿಂದೆ ಹಬ್ಬಿದ್ದ ಮಾತು ಈ ಸತ್ಯವಾಗಿದೆ.


ಬಾಲಿವುಡ್ ಸ್ಟಾರ್ ಜೋಡಿಗಳಾಗಿದ್ದ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ತಾವು ಇಬ್ಬರು ಪರಸ್ಪರ ದೂರವಾಗುತ್ತಿದ್ದೇವೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.


ಕೆಲ ದಿನಗಳ ಹಿಂದೆ ‌ಶಮಿತಾ ಶೆಟ್ಟಿ , ನಾನು ‌ಇದುವರೆಗೆ‌ ಕೆರಿಯರ್ ನಲ್ಲಿ ‌ತುಂಬಾ ತಪ್ಪುಗಳನ್ನು ಮಾಡಿದ್ದೇನೆ. ಅದಕ್ಕಾಗಿ ಪಶ್ಚಾತ್ತಾಪ ಪಟ್ಟಿದ್ದೇನೆ. ಕೆಲವೊಮ್ಮೆ ಒಳ್ಳೆಯ ಸಂಬಂಧಗಳ ಕೂಡ ಕೊನೆಯಾಗುತ್ತವೆ ಎಂದು ಹೇಳುವ‌ ಮೂಲಕ ತಮ್ಮ ಹಾಗೂ ರಾಕೇಶ್ ಸಂಬಂಧದ ಬ್ರೇಕಪ್ ಬಗ್ಗೆ ಪರೋಕ್ಷವಾಗಿ ಹೇಳಿದ್ದರು.




ಇದಾದ ಬಳಿಕ ಸೋಶಿಯಲ್ ‌ಮೀಡಿಯಾದಲ್ಲಿ ಇಬ್ಬರ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಇಬ್ಬರು ಒಟ್ಟಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೀಗ ಇಬ್ಬರು ತಮ್ಮ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ.


ಈ ಬಗ್ಗೆ ರಾಕೇಶ್ ನಾನು ಹಾಗೂ ಶಮಿತಾ ಇನ್ಮುಂದೆ ಒಂದಾಗಿ ಇರುವುದಿಲ್ಲ. ನಮ್ಮಿಬ್ಬರನ್ನು ವಿಧಿ ಅನಿರೀಕ್ಷಿತವಾಗಿ ಭೇಟಿ ಮಾಡಿಸಿತು. ಪ್ರೀತಿ ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ಇಬ್ಬರು ಜತೆಯಾಗಿ ಕಾಣಿಸಿಕೊಂಡಿರುವ ಮ್ಯೂಸಿಕ್ ವಿಡಿಯೋ ಅಭಿಮಾನಿಗಳಿಗೆ ಸರ್ಪಿಸುತ್ತೇವೆ ಎಂದಿದ್ದಾರೆ.


ಶಮಿತಾ ಶೆಟ್ಟಿ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ.




ರಾಕೇಶ್ ಹಾಗೂ ಶಮಿತಾ ಶೆಟ್ಟಿ ಹಿಂದಿಯ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ‌ಭೇಟಿಯಾಗಿದ್ದರು, ಅಲ್ಲಿಂದ ಶುರುವಾದ ಅವರ ಸ್ನೇಹ‌‌ ಪ್ರೀತಿಗೆ ತಿರುಗಿ ಬಿಗ್ ಬಾ‌ಸ್ ಮನೆಯ ಹೊರಗೆಯೂ ಹಾಗೆಯೇ ಇತ್ತು.

RELATED ARTICLES

Most Popular

Share via
Copy link
Powered by Social Snap