ಕಿಂಗ್ ಖಾನ್ ಶಾರುಖ್ 5 ವರ್ಷದ ಬಳಿಕ ಬಣ್ಣದ ಲೋಕಕ್ಕೆ ಬರಲು ರೆಡಿಯಾಗಿದ್ದಾರೆ. ಮುಂದಿನ ವರ್ಷ ಅವರ ‘ಪಠಾಣ್’, ‘ಜವಾನ್’ ಚಿತ್ರಗಳು ತೆರೆಗೆ ಬರಲಿವೆ.
ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ ಅವರು ಆ್ಯಕ್ಷನ್ ಕಟ್ ಹೇಳಿರುವ ‘ಜವಾನ್’ ನಲ್ಲಿ ಶಾರುಖ್ ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂತಿಮ ಹಂತದ ಶೂಟ್ ನಲ್ಲಿರುವ ‘ಜವಾನ್’ ಓಟಿಟಿ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಥಿಯೇಟರ್ ಗೂ ಬರುವ ಮೊದಲೇ, ಶೂಟಿಂಗ್ ಮುಗಿಯುವ ಮುನ್ನವೇ ‘ಜವಾನ್’ ಚಿತ್ರವನ್ನು 100 ಕೊಟ್ಟು ಅಮೇಜಾನ್ ಪ್ರೈಮ್ ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಇಷ್ಟು ದೊಡ್ಡ ಮೊತ್ತಕ್ಕೆ ಚಿತ್ರದ ಓಟಿಟಿ ಹಕ್ಕು ಸೇಲಾಗಿರುವುದು ಹಿಸ್ಟರಿ ಆಗಿದೆ. ಈ ಬಗ್ಗೆ ಸಿನಿಮಾ ತಂಡ ಅಧಿಕೃತವಾಗಿ ವಿಚಾರವನ್ನು ಹೇಳಬೇಕಿದೆ.
‘ಜವಾನ್’ ಬಹುಭಾಷೆಯಲ್ಲಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ಶಾರುಖ್ ಜೊತೆ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ.

