ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಘೋಷಿಸಿರುವ ಹೊಸ ಸಿನಿಮಾಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದೆ.
ನಿರ್ದೇಶಕ ಸಂತೋಷ್ ಆನಂದರಾಮ್ “ಮಿಸ್ಟರ್ & ಮಿಸೆಸ್ ರಾಮಾಚಾರಿ” ಬಳಿಕ ‘ರಾಜಕುಮಾರ”, “ಯುವರತ್ನ” ಸಿನಿಮಾಗಳನ್ನು ಮಾಡಿ ಅಪ್ಪು ಅವರೊಂದಿಗೆ ಆತ್ಮೀಯವಾಗಿ ಇದ್ದರು. ಅಪತ ಅಗಲಿಕೆಯ ಬಳಿಕ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಮಗ ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡುವುದಾಗಿ ಹೇಳಿದ್ದರು. ಅವರ ಮೊದಲ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದೆ.


“ಯುವ1” ಫೋಟೋ ಶೂಟ್ ಮಾಡಿಸಿ, ಪ್ರೇಕ್ಷಕರ ಗಮನ ಸೆಳೆದಿತ್ತು. ಆ ಬಳಿಕ ಸಿನಿಮಾದ ಯಾವುದೇ ಅಪ್ ಡೇಟ್ ಇರಲಿಲ್ಲ.
ಟ್ವಿಟರ್ ನಲ್ಲಿ ಇದೇ ಬಗ್ಗೆ ಅಭಿಮಾನಿಯೊಬ್ಬರು “ಯುವ1” ಅಪ್ ಡೇಟ್ ನೀಡಿ ಎಂದಿದ್ದಾರೆ. ಇದಕ್ಕೆ ಆಶ್ಚರ್ಯ ಎಂಬಂತೆ ಸ್ವತಃ ನಿರ್ದೇಶಕ ಸಂತೋಷ್ ಆನಂದರಾಮ್ ಅವರು, ಅಕ್ಟೋಬರ್‌ನಲ್ಲಿ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡುವುದಾಗಿ ಇದೀಗ ಸಂತೋಷ್ ಆನಂದ್‌ರಾಮ್ ಹೇಳಿದ್ದಾರೆ. ಅಕ್ಟೋಬರ್ ನಲ್ಲಿ ಚಿತ್ರದ ಬಗ್ಗೆ ಅಪ್ ಡೇಟ್ ಕೊಡುವುದಾಗಿ ರಿಪ್ಲೈ ಮಾಡಿದ್ದಾರೆ.
ಇದರೊಂದಿಗೆ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲೇ ರಿಲೀಸ್ ಆಗಬೇಕಿದ್ದ “ರಾಘವೇಂದ್ರ ಸ್ಟೋರ್ಸ್”
ಸಿನಿಮಾದ ಬಗ್ಗೆ ಮಾಹಿತಿ ನೀಡಿರುವ ಅವರು, ಶೀಘ್ರದಲ್ಲಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದೇವೆ ಎಂದಿದ್ದಾರೆ.

