ನಟ ಯಶ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಚಂದನವನದಲ್ಲಿ ಗಟ್ಟಿ ನೆಲೆಯಾಗಿಸಿದ “Mr&Mrs ರಾಮಾಚಾರಿ” ಸಿನಿಮಾ ರಿಲೀಸ್ ಆಗಿ ಎಂಟು ವರ್ಷಗಳಾಗಿವೆ.
ರಾಧಿಕಾ ಪಂಡಿತ್ ಹಾಗೂ ಯಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಸಿನಿಮಾದ ಹಾಡು, ಕಥೆ, ಮಾಸ್ ಗಮನ ಸೆಳೆದಿತ್ತು. ಸಿನಿಮಾ 60 ಕೋಟಿಗೂ ಹೆಚ್ಚು ಕಮಾಯಿ ಮಾಡಿತ್ತು.
ಕೆಜಿಎಫ್ ಸರಣಿಯ ಮೊದಲು ಯಶ್ ಅವರಿಗೆ ಅತೀ ಹೆಚ್ಚು ಜನಪ್ರಿಯ ತಂದುಕೊಟ್ಟ ಸಿನಿಮಾದಲ್ಲಿ ‘“Mr&Mrs ರಾಮಾಚಾರಿ’ ಸಿನಿಮಾವೂ ಒಂದು.
ಸಂತೋಷ್ ಆನಂದರಾಮ್ ಸಿನಿಮಾಕ್ಕೆ 8 ವರ್ಷ ಆದ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಹಂಚಿಕೊಂಡು ಖುಷಿಯ ಕ್ಷಣವನ್ನು ನೆನಪು ಮಾಡಿಕೊಂಡು, ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದ್ದಾರೆ.
ಇಂದು“Mr&Mrs ರಾಮಾಚಾರಿ”ಗೆ 8 ವರ್ಷ.ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶಕೊಟ್ಟು ಬೆನ್ನುತಟ್ಟಿದ
ಯಶ್ ಅವರಿಗೆ ಕೃತಜ್ಞನಾಗಿರುತ್ತೇನೆ.
ನನ್ನ ಚಿತ್ರತಂಡಕ್ಕೆ ಹಾಗೂ ರಾಧಿಕಾ ಪಂಡಿತ್ ಅವರಿಗೆ ನನ್ನ ಧನ್ಯವಾದ. ಈ ಚಿತ್ರಕ್ಕೆ ಆಶೀರ್ವದಿಸಿದ ಸಾಹಸ ಸಿಂಹ ವಿಷ್ಣುದಾದಾರವರಿಗೆ ಈ ಚಿತ್ರವನ್ನು ಇತಿಹಾಸ ಪುಟ ಸೇರಿಸಿದ ಕನ್ನಡಿಗರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಸಂತೋಷ್ ಆನಂದರಾಮ್ ‘ರಾಘವೇಂದ್ರ ಸ್ಟೋರ್ಸ್’ ಹಾಗೂ ಯುವರಾಜ್ ಕುಮಾರ್ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

