2011ರಲ್ಲಿ ಬಿಡುಗಡೆಯಾಗಿ, ಕನ್ನಡಿಗರು ಬಹುವಾಗಿ ಮೆಚ್ಚಿದ ಲವ್ ಸ್ಟೋರಿಗಳಲ್ಲಿ ಒಂದಾಗಿದ್ದು ‘ಸಂಜು ವೆಡ್ಸ್ ಗೀತಾ’ ಸಿನಿಮಾ. ಡೈಮಂಡ್ ಸ್ಟಾರ್ ಶ್ರೀನಗರ್ ಕಿಟ್ಟಿ ಹಾಗು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಅಪಾರ ಸಿನಿಪ್ರೇಮಿಗಳ ಮನಗೆದ್ದಂತಹ ಒಂದೂ ಭಾವುಕ ಪ್ರೇಮಕಥೆಯಾಗಿ ಇಂದಿಗೂ ಉಳಿದುಕೊಂಡಿದೆ. ಸಿನಿಮಾದ ಹಾಡುಗಳು ಈಗಲೂ ಕೂಡ ಜನರ ಬಾಯಲ್ಲಿ ಗುನುಗುತ್ತಿರುತ್ತವೆ. ಬ್ಲಾಕ್ ಬಸ್ಟರ್ ಆಗಿದ್ದ ಈ ‘ಸಂಜು ವೆಡ್ಸ್ ಗೀತ’ ಸಿನಿಮಾಗೆ ಎರಡನೇ ಭಾಗವನ್ನ ನೀಡಲು ಚಿತ್ರತಂಡ ಸಜ್ಜಾಗಿದೆ. ‘ಸಂಜು ವೆಡ್ಸ್ ಗೀತ’ ಸಿನಿಮಾ ನೀಡಿದ್ದ ಅದೇ ನಿರ್ದೇಶಕ ನಾಗಶೇಖರ್ ಅವರು ಇದೀಗ ‘ಸಂಜು ವೆಡ್ಸ್ ಗೀತ 2’ ಮಾಡಲು ಹೊರಟಿದ್ದಾರೆ.


ಇಂದು(ಜುಲೈ 8) ಶ್ರೀನಗರ್ ಕಿಟ್ಟಿ ಅವರ ಜನ್ಮದಿನದ ಸಲುವಾಗಿ ಈ ಶುಭಸುದ್ದಿಯನ್ನ, ಈ ಹೊಸ ಸಿನಿಮಾವನ್ನ ನಿರ್ದೇಶಕ ನಾಗಶೇಖರ್ ಅವರು ಘೋಷಿಸಿದ್ದಾರೆ. ಇದು ಮೊದಲನೇ ಸಿನಿಮಾದ ಮುಂದುವರೆದ ಭಾಗ ಆಗಿರದೆ, ಒಂದೂ ಬೆರೆಯದೆ ಕಥೆಯಾಗಿ ತೆರೆಯ ಮೇಲೆ ಬರಲಿದೆ. ನಿರ್ದೇಶಕ ನಾಗಶೇಖರ್ ಅವರೇ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಮೋಹಕ ತಾರೆ ರಮ್ಯಾ ಚಿತ್ರವನ್ನ ಅರ್ಪಿಸಲಿದ್ದಾರೆ. ಈ ವರ್ಷದ ಅಂತ್ಯಕ್ಕೆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, 2024ರ ದಸರಾಗೆ ‘ಸಂಜು ವೆಡ್ಸ್ ಗೀತಾ 2’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶ್ರೀನಗರ್ ಕಿಟ್ಟಿ ಅವರು ನಾಯಕರು ಅನ್ನುವುದು ಹೊರತಾಗಿ ಬೆರಾವುದೇ ವಿಚಾರ ಚಿತ್ರತಂಡ ಹೊರಹಾಕಿಲ್ಲ.

