

ಕಿರಿಕ್ ಪಾರ್ಟಿ ಬೆಡಗಿ ನಟಿ ಸಂಯುಕ್ತ ಹೆಗ್ಡೆ ಅವರಿಗೆ ಶೂಟಿಂಗ್ ವೇಳೆ ಗಂಭೀರ ಗಾಯವಾಗಿದೆ.
ಅವರು ಬುಧವಾರ ಸಂಜೆ ತೆಲುಗು, ತಮಿಳು ಭಾಷೆಯಲ್ಲಿ ಬರುವ ‘ಕ್ರೀಮ್‘ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.


ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕ್ರೀಮ್ ಚಿತ್ರದ ಚಿತ್ರೀಕರಣ ನಡೆಯುತಿತ್ತು. ಫೈಟ್ ಮಾಸ್ಟರ್ ಪ್ರಭು ಅವರ ಸಮ್ಮುಖದಲ್ಲಿ ಫೈಟ್ ಸೀನ್ ನಡೆಯುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದ್ದು, ಡ್ಯೂಪ್ ಬಳಸದೆ ಇರುವುದರಿಂದ ಸಂಯುಕ್ತ ಅವರ ಕಾಲಿಗೆ ಗಂಭೀರ ಗಾಯವಾಗಿದೆ.
ಈ ಚಿತ್ರಕ್ಕೆ ಅಭಿಷೇಕ್ ಬಸಂತ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ.
ಅವಘಡದ ಬಳಿಕ ನಟಿ ಸಂಯುಕ್ತ ಹೆಗ್ಡೆ ಅವರು ಚೇತರಿಸಿಕೊಳ್ಳುತ್ತಿದ್ದು, 15 ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಹೇಳಿದ್ದಾರೆ ಎಂದು ನಿರ್ಮಾಪಕ ಡಿ.ಕೆ. ದೇವೇಂದ್ರ ಅವರು ಮಾಹಿತಿ ನೀಡಿದ್ದಾರೆ.

