ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವಿದೆ. ತನ್ನ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಎಷ್ಟು ದೂರದಿಂದ ಬೇಕಾದರೂ ಸಂಚಾರಿಸಿ ಬರುತ್ತಾರೆ.
ಇತ್ತೀಚೆಗಷ್ಟೇ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಲ್ಮಾನ್ ಖಾನ್ ತನ್ನಗಾಗಿ ದೂರದಿಂದ ಬಂದ ಅಭಿಮಾನಿಯನ್ನು ಖುಷಿಪಡಿಸಿ ಅವರೊಂದಿಗೆ ಫೋಟೋ ಕ್ಲಿಕ್ಕಸಿಕೊಂಡು ಅಪ್ಲೋಡ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಸಮೀರ್ ಎಂಬ ಅಭಿಮಾನಿ ಸಲ್ಮಾನ್ ಖಾನ್ ಮೇಲಿನ ಅಭಿಮಾನದಿಂದ ಬರೋಬ್ಬರಿ 1,100 ಕಿಲೋಮೀಟರ್ ಸೈಕಲ್ ತುಳಿದುಕೊಂಡು ಮುಂಬೈಗೆ ಬಂದಿದ್ದಾರೆ.
ಮುಂಬಯಿಯಲ್ಲಿ ಸಲ್ಮಾನ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಸಲ್ಮಾನ್ ಅಪ್ಪಟ ಅಭಿಮಾನಿಯಾಗಿರುವ ಸಮೀರ್ ಜೊತೆ ನಟ ಸಲ್ಮಾಯ ಖಾನ್ ಅವರು ಫೋಟೋ ಕ್ಲಿಕ್ಕಿಸಿಕೊಂಡು, ಅಭಿಮಾನಿ ಮನ – ಮೊಗದಲ್ಲಿ ಖುಷಿ ತಂದಿದ್ದಾರೆ.
ಸದ್ಯ ಸಲ್ಮಾನ್ ಖಾನ್ ಹಾಕಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

