ಮಲಯಾಳಂನ ʼಲೂಸಿಫರ್ʼ ಸಿನಿಮಾದ ರಿಮೇಕ್ ಸಿನಿಮಾ ʼಗಾಡ್ ಫಾದರ್ʼ ರಿಲೀಸ್ ಗೆ ರೆಡಿಯಾಗಿದೆ. ಅಕ್ಟೋಬರ್ 5 ರಂದು ಚಿತ್ರ ತೆರೆಗೆ ಬರಲಿದೆ. ಚಿರಂಜೀವಿಯೊಂದಿಗೆ ಸ್ಪೆಷೆಲ್ ರೋಲ್ ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ.
ಚಿತ್ರ ತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಇತ್ತೀಚಿಗೆ ಸ್ಟಾರ್ ಚಿರಂಜೀವಿ ಯೂಟ್ಯೂಬ್ ಚಾನೆಲ್ ವೊಂದಕ್ಕೆ ವಿಶೇಷ ಸಂದರ್ಶನವನ್ನು ನೀಡಿದ್ದು ಅದರ ಪ್ರೋಮೋ ರಿಲೀಸ್ ಆಗಿದೆ.
ಇದರಲ್ಲಿ ಮಾತಾನಾಡಿರುವ ಅವರು,ಸಿನಿಮಾದಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಅವರು ನಟಿಸಿದ್ದಾರೆ. ಅವರು ಮೊದಲು ಯಾವುದೇ ಕಾರಣಕ್ಕೂ ನಟಿಸಲ್ಲ ಎಂದಿದ್ದರು. ಆದರೆ ನೀವು ಸಿನಿಮಾವನ್ನು ನೋಡಿದರೆ ನಿಮಗೆ ಅವರ ನಟನೆ ನೋಡಿ ಆಶ್ಚರ್ಯವಾಗಬಹುದು. ಹಾಗೆ ನಟಿಸಿದ್ದಾರೆ ಅವರು ಎಂದು ಚಿರಂಜೀವಿ ಹೇಳಿದ್ದಾರೆ.
ಇನ್ನು ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ಮಾಡಿರುವ ಸಲ್ಮಾನ್ ಬಗ್ಗೆ ಪ್ರಶಂಸೆ ಮಾಡುತ್ತಾ, ಸಲ್ಮಾನ್ ಖಾನ್ ಸಂಭಾವನೆ ತೆಗೆದುಕೊಳ್ಳದೆ ಈ ಸಿನಿಮಾವನ್ನು ಮಾಡಿದ್ದಾರೆ. ಅವರು ಪ್ರೀತಿಗಾಗಿ ಮಾತ್ರ ಸಿನಿಮಾ ಮಾಡುತ್ತಾರೆ. ಹ್ಯಾಟ್ಸ್ ಆಫ್ ಸಲ್ಮಾನ್ ಭಾಯಿ, ವಿ ಲವ್ ಯೂ ಎಂದು ಹೇಳಿದ್ದಾರೆ.
ಮೋಹನ್ ರಾಜಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಯುಎ ಪ್ರಮಾಣ ಪತ್ರವನ್ನು ಸೆನ್ಸಾರ್ ಬೋರ್ಡ್ ನೀಡಿದೆ.
ಚಿತ್ರದಲ್ಲಿ ಚಿರಂಜೀವಿ, ಸಲ್ಮಾನ್ ಖಾನ್, ಪುರಿ ಜಗನ್ನಾಥ್, ನಯನತಾರ ಮುಂತಾದ ಕಲಾವಿದರು ನಟಿಸಿದ್ದಾರೆ.

