ಪ್ರಭಾಸ್ – ಪ್ರಶಾಂತ್ ನೀಲ್ ಅವರ ‘ಸಲಾರ್’ ಮುಂದಿನ ವರ್ಷ ಬಿಡುಗಡೆ ಆಗಲಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು.
ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಆದರೂ ಚಿತ್ರಕ್ಕೆ ಈಗಾಗಲೇ ಕೆಲ ಅಡೆತಡೆಗಳು ಬಂದಿವೆ. ಮತ್ತೆ ಚಿತ್ರೀಕರಣ ಆರಂಭಗೊಂಡಿದ್ದು, ಕಲಾವಿದರು ಭಾಗಿಯಾಗಿದ್ದಾರೆ.
ಒಂದು ದೊಡ್ಡ ಚಿತ್ರದ ಶೂಟಿಂಗ್ ನಡೆಯುವಾಗ ಅಲ್ಲಿನ ಫೋಟೋಗಳು ಕೆಲವೊಮ್ಮೆ ಲೀಕ್ ಆಗುತ್ತದೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.
ಕೆಲ ದಿನಗಳ ಹಿಂದೆ ‘ಸಲಾರ್’ ಸಿನಿಮಾ ಸೆಟ್ ನ ಫೋಟೋಗಳು ಲೀಕ್ ಆಗಿದ್ದಿದೆ. ಈ ಕಾರಣದಿಂದ ಪ್ರಶಾಂತ್ ನೀಲ್ ಅವರು ಹೊಸ ನಿರ್ಧಾರಕ್ಕೆ ಬಂದಿದ್ದಾರೆ.
ಯಾವುದೇ ಕಾರಣಕ್ಕೂ ಸಿನಿಮಾದ ಶೂಟಿಂಗ್ ಸೆಟ್ ನ ಫೋಟೋಗಳು ಲೀಕ್ ಆಗದಂತೆ ನಿರ್ದೇಶಕರರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ಸಿನಿಮಾ ತಂಡದವರು ಇನ್ನುಮುಂದೆ ಶೂಟಿಂಗ್ಗೆ ಬರುವುದಕ್ಕೂ ಮೊದಲು ತಮ್ಮ ಮೊಬೈಲ್ಗಳನ್ನು, ರೂಮ್ ಅಥವಾ ನಿಗದಿಪಡಿಸಿದ ಲಾಕರ್ನಲ್ಲಿ ಇಟ್ಟು ಬರಬೇಕು. ಇದರಿಂದ ಸೆಟ್ನಲ್ಲಿ ಮೊಬೈಲ್ ಬಳಕೆ ನಿಲ್ಲಲಿದೆ. ಈ ಬಗ್ಗೆ ಸೆಟ್ನಲ್ಲಿ ಸಿಬ್ಬಂದಿಗೆ ಸೂಚನೆ ಹೋಗಿದೆ ಎನ್ನಲಾಗಿದೆ.
ಸಿನಿಮಾದ ತಾಂತ್ರಿಕ ವರ್ಗದವರು ಯಾವುದೇ ಕರೆ ಮಾಡವುದಾದರೆ, ನಿರ್ದೇಶಕರ ಒಪ್ಪಿಗೆ ಕೇಳಬೇಕು.
ಈ ಹಿಂದೆ ರಾಜಮೌಳಿ ಅವರು, ಆರ್ ಆರ್ ಆರ್ ಚಿತ್ರ ತಂಡಕ್ಕೂ ಈ ನಿಯಮವನ್ನು ತಂದಿದ್ದರು.

