ದಕ್ಷಿಣ ಭಾರತದ ಖ್ಯಾತ ನಟ ಸಾಯಿ ಪಲ್ಲವಿ ʼಗಾರ್ಗಿʼ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಅವರ ಸಿನಿಮಾಗಳನ್ನು ನೋಡಲು ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ʼಪ್ರೇಮಂʼ ಬೆಡಗಿ ಒಂದಲ್ಲ ಒಂದು ವಿಷಯಗಳಿಂದ ಕೆಲವೊಮ್ಮೆ ಸುದ್ದಿಯಾಗುತ್ತಾರೆ.
ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಹವಾ ಎಬ್ಬಿಸಿರುವ ಸಾಯಿ ಪಲ್ಲವಿ ಎಂಥ ಪಾತ್ರಕ್ಕೂ ಜೀವ ತುಂಬ ಬಲ್ಲರು. ಅವರ ನೋಟ, ಅಭಿನಯವನ್ನು ನೋಡುವುದೇ ಚೆಂದ. ಇತ್ತೀಚೆಗೆ ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ಕಮಾಲ್ ಮಾಡಿಲ್ಲ.
ಈಗ ಸಾಯಿ ಪಲ್ಲವಿ ಕಮ್ ಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. ಈ ಬಾರಿ ಟಾಲಿವುಡ್, ಕಾಲಿವುಡ್ ರಂಗವಲ್ಲ. ಬಿಟೌನ್ ಅಂದರೆ ಬಾಲಿವುಡ್ ಗೆ ಸಾಯಿ ಪಲ್ಲವಿ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರ ಬಿದ್ದಿದೆ.
ವರದಿಯ ಪ್ರಕಾರ ಬಾಲಿವುಡ್ ನಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಬಿಗ್ ಬಜೆಟ್ ಚಿತ್ರವೊಂದು ಬರಲಿದೆ. ಈ ಚಿತ್ರದಲ್ಲಿ ʼಸೀತೆʼಯ ಪಾತ್ರವೇ ಪ್ರಧಾನವಂತೆ. ಈ ಸೀತೆಯೆ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಅಪ್ರೋಚ್ ಮಾಡಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.
ʼಸೀತೆʼಯಾಗಿ ಸಾಯಿ ಪಲ್ಲವಿ ಅವರು ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ನಲ್ಲೂ ಸಾಯಿ ಪಲ್ಲವಿ ಮೋಡಿ ಮಾಡಲಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಈಗಾಗಲೇ ಸುಮಾರು 500 ಕೋಟಿ ರೂ. ಬಜೆಟ್ ನಲ್ಲಿ ಪ್ರಭಾಸ್ ಅವರ ʼಆದಿಪುರುಷ್ʼ ಚಿತ್ರ ತೆರೆಗೆ ಬರಲಿದೆ.

