ಎಸ್.ಎಸ್. ರಾಜಮೌಳಿ ಅವರ ‘ಆರ್ ಆರ್ ಆರ್’ ದಕ್ಷಿಣ ಭಾರತದ ದೊಡ್ಡ ಸಿನಿಮಾ ಭಾರತದಲ್ಲಿ 1000 ಕೋಟಿ ಕ್ಲಬ್ ಸೇರಿ ಹಲವು ದಾಖಲೆಗಳನ್ನು ಉಡೀಸ್ ಮಾಡಿದ ಸಿನಿಮಾ.
ಇತ್ತೀಚೆಗೆ ಜಪಾನ್ ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ (24 ಕೋಟಿ) ಮಾಡಿದ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆರ್ ಆರ್ ಆರ್ ಜಪಾನ್ ನಲ್ಲಿದ್ದ ರಜಿನಿಕಾಂತ್ ಅವರ ‘ಮುತ್ತು’ ಸಿನಿಮಾದ ದಾಖಲೆಯನ್ನು ಈ ಮೂಲಕ ಮುರಿದಿದೆ.
ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್’ ಮೂಲಕ ನೀಡಲಾಗುವ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿಯ ಎರಡು ವಿಭಾಗದಲ್ಲಿ ಆರ್ ಆರ್ ಆರ್ ಚಿತ್ರ ಆಯ್ಕೆಯಾಗಿದೆ.
‘ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಉಳಿದ ಸಿನಿಮಾಗಳಿಗೆ ಪೈಪೋಟಿ ನೀಡುತ್ತಿದೆ.

