HomeSportsಐಪಿಎಲ್ ಆರಂಭಕ್ಕೂ ಮುನ್ನ ಆರ್ ಸಿಬಿಗೆ ಬಿಗ್ ಶಾಕ್

ಐಪಿಎಲ್ ಆರಂಭಕ್ಕೂ ಮುನ್ನ ಆರ್ ಸಿಬಿಗೆ ಬಿಗ್ ಶಾಕ್

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಬಲಿಷ್ಠ ಹಾಗೂ ‌ಪ್ರಮುಖ ಆಟಗಾರ. ಇತ್ತೀಚೆಗೆ ಐಪಿಎಲ್ ಹರಾಜು ಮುಕ್ತಾಯವಾಗಿದೆ. ಆ ನಿಟ್ಟಿನಲ್ಲಿ ಐಪಿಎಲ್‌ ಸೀಸನ್‌ 16 ಕ್ಕೆ ಭರ್ಜರಿ ತಯಾರಿ ಆರಂಭವಾಗಿದೆ.

ಏಪ್ರಿಲ್ – ಮೇನಲ್ಲಿ ನಡೆಯುವ ಐಪಿಎಲ್ ನಲ್ಲಿ ಆರ್ ಸಿಬಿಯ ಸ್ಟಾರ್ ಆಟಗಾರ ‌ಮ್ಯಾಕ್ಸ್ ವೆಲ್ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ.

ಕಳೆದ ತಿಂಗಳು ಮ್ಯಾಕ್ಸ್ ವೆಲ್ ಸ್ನೇಹಿತರೊಬ್ಬರ ಹುಟ ಹಬ್ಬದ ಪಾರ್ಟಿಯಲ್ಲಿ ಬಿದ್ದು ಕಾಲಿಗೆ ಗಂಭೀರ ಪೆಟ್ಟು‌ ಮಾಡಿಕೊಂಡಿದ್ದಾರೆ. ಇದಕ್ಕೆ ಶಸ್ತ್ರ ಚಿಕಿತ್ಸೆಯೂ ಯಶಸ್ವಿ ಆಗಿದ್ದು ಸದ್ಯ ಮ್ಯಾಕ್ಸ್ ವೆಲ್ ನಡೆಯುವುದು ಕೂಡ ಕಷ್ಟವಾಗಿದೆ.

ಈ‌ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಮ್ಯಾಕ್ಸಿ
“ʻಬಹುಶಃ ನನ್ನ ಪಾದವನ್ನು ಕಳೆದುಕೊಳ್ಳುವ ಅವಕಾಶ ಇತ್ತು. ಆ ಘಟನೆ ತುಂಬಾ ಭಯಾನಕವಾಗಿತ್ತು. ಈಗ ನನಗೆ ನಡೆದಾಡಲು ಕೂಡ ಕಷ್ಟವಾಗುತ್ತಿದೆ. ನಡೆಯುವುದನ್ನು ಪ್ರಾರಂಭಿಸಬೇಕಿದೆ. ನನ್ನ ಪತ್ನಿಯ ಬೆಂಬಲವೇ ನನಗೀಗ ಆಶ್ರಯವಾಗಿದೆ. ಒಂದೂವರೆ ತಿಂಗಳಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಈ ನೋವಿನಿಂದ ಬೇಗ ಹೊರಬರಲು ಅವರು ಸಹಾಯ ಮಾಡಿದ್ದಾರೆ. ಈಗ ಸ್ವಲ್ಪ ಆರಾಮದಾಯಕವಾಗಿ ನಡೆಯಲು ಆರಂಭಿಸುತ್ತಿದ್ದೇನೆ. ಇನ್ನೂ ಕೆಲವು ದಿನಗಳಲ್ಲಿ ಊರುಗೋಲಿನ ಅವಶ್ಯಕತೆ ಇಲ್ಲದೆ ಓಡಾಡುತ್ತೇನೆ. ಆದಷ್ಟು ಬೇಗನೆ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಗ್ಲೆನ್ ಮ್ಯಾಕ್ಸ್‌ವೆಲ್” ಹೇಳಿದ್ದಾರೆ.

ಒಂದು ವೇಳೆ ಐಪಿಎಲ್ ವೇಳಗೆ ಆರ್ ಸಿಬಿ ತಂಡದಲ್ಲಿ ‌ಮ್ಯಾಕ್ಸ್ ವೆಲ್ ಇಲ್ಲದೆ ಇದ್ದರೆ, ಇದುವರೆಗೆ ಕಪ್ ಗೆಲ್ಲದ ಆರ್ ಸಿಬಿಗೆ ದೊಡ್ಡ ಹಿನ್ನೆಡ ಆಗುವುದಂತೂ ಖಚಿತ.

RELATED ARTICLES

Most Popular

Share via
Copy link
Powered by Social Snap