ಬಾಲಿವುಡ್ ನ ಖ್ಯಾತ ಅ್ಯಕ್ಷನ್ ನಿರ್ದೇಶಕ ರೋಹಿತ್ ಶೆಟ್ಟಿ ಚಿತ್ರೀಕರಣ ಮಾಡುತ್ತಿರುವಾಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಸಿಂಗಂ’, ‘ಗೋಲ್ ಮಾಲ್’ ಸೇರಿದಂತೆ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿ ಬಾಲಿವುಡ್ ನಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಹಿಟ್ ನಿರ್ದೇಶಕರಲ್ಲಿ ರೋಹಿತ್ ಶೆಟ್ಟಿ ಅವರು ಕೂಡ ಒಬ್ಬರು.
ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾರುಗಳನ್ನು ಬಳಸಿ ಆ್ಯಕ್ಷನ್ ಸೀನ್ ಗಳ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ರೋಹಿತ್ ಶೆಟ್ಟಿ ಅವರ ಬೆರಳುಗಳನ್ನು ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸಿರೀಸ್ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ.
ವೆಬ್ ಸರಣಿಯಲ್ಲಿ ಬಾಲಿವುಡ್‌ನ ಜನಪ್ರಿಯ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ. ಜೊತೆಗೆ ಶಿಲ್ಪಾ ಶೆಟ್ಟಿ, ವಿವೇಕ್ ಒಬೆರಾಯ್, ನಿಖಿತ್ ಧೀರ್ ಸಹ ನಟಿಸಿದ್ದಾರೆ.

