ರೋಹಿತ್ ಶರ್ಮಾ ಇತ್ತೀಚಿಗೆ ಅಂತಾರಾಷ್ಟ್ರೀಯ ಟಿ-20ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗ ಏಷ್ಯಾಕಪ್ ನಲ್ಲಿ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಸೋತು, ಏಷ್ಯಾಕಪ್ ನಲ್ಲಿ ನಿರ್ಗಮನದ ಹಾದಿಯಲ್ಲಿರುವ ಟೀಮ್ ಇಂಡಿಯಾ ಫೈನಲ್ ಗೆ ತಲುಪಬೇಕಾದರೆ ಪವಾಡ ನಡೆಯಬೇಕು.
ಸೋಲಿನ ಹೊರತಾಗಿಯೂ ಭಾರತದ ನಾಯಕ ಏಷ್ಯಾಕಪ್ ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.
ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡೂಲ್ಕರ್ ಏಷ್ಯಾಕಪ್ ನ ಏಕದಿನ ಮಾದರಿಯಲಲಿ ಒಟ್ಟು 23 ಪಂದ್ಯಗಳನ್ನು ಆಡಿದ್ದಾರೆ. 971 ರನ್ ಗಳಿಸಿದ್ದಾರೆ. ಈ ದಾಖಲೆ ರೋಹಿತ್ ಶರ್ಮಾ ಮುರಿದಿದ್ದಾರೆ.
ಹಿಟ್ ಮ್ಯಾನ್ ಇದುವರೆಗೆ ಏಷ್ಯಾಕಪ್ ನ ಏಕದಿನ, ಟಿ-20 ಮಾದರಿಯನ್ನು ಆಡಿದ್ದಾರೆ. ಒಟ್ಟು 31 ಪಂದ್ಯದಲ್ಲಿ 1016 ರನ್ ಗಳಿಸಿದ್ದಾರೆ. ಆ ಮೂಲಕ ಈ ಸಾಧನೆಯನ್ನು ಮಾಡಿದ ಭಾರತದ ಏಕೈಕ ಆಟಗಾರನಾಗಿದ್ದಾರೆ.
ಇದರಲ್ಲಿ ಮೊದಲಿಗೆ ಇರುವವರು ಶ್ರೀಲಂಕಾದ ಸನತ್ ಜಯಸೂರ್ಯ 24 ಏಷ್ಯಾಕಪ್ ಪಂದ್ಯವನ್ನಾಡಿ 1220 ರನ್ ಗಳಿಸಿದ್ದಾರೆ. ಎರಡನೇಯದಾಗಿ ಶ್ರೀಲಂಕಾದ ಕುಮಾರ್ ಸಂಗಕ್ಕರ 24 ಏಪ್ಯಾಕಪ್ ಪಂದ್ಯದಲ್ಲಿ 1075 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಸಚಿನ್ 4ನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ, 20 ಪಂದ್ಯಗಳಲ್ಲಿ 923 ರನ್ ಗಳಿಸಿ 5 ನೇ ಸ್ಥಾನದಲ್ಲಿದ್ದಾರೆ.

