ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಮೂರು ಏಕದಿನ ಪಂದ್ಯವನ್ನು ಮಂಗಳವಾರದಿಂದ ಆಡಲಿದೆ.
ಈ ನಿಟ್ಟಿನಲ್ಲಿ ಸೋಮವಾರ ಸುದ್ದಿಗೋ಼ಷ್ಟಿಯಲ್ಲಿ ರೋಹಿತ್ ಹಲವು ವಿಚಾರಗಳ ಬಗ್ಗೆ ಮಾಧ್ಯಮದ ಮುಂದೆ ಮಾತಾನಾಡಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮೂವರು ಪ್ರಮುಖ ಆಟಗಾರರನ್ನು ಶ್ರೀಲಂಕಾ ವಿರುದ್ಧದ ಟಿ- 20 ಸರಣಿಗೆ ಆಯ್ಕೆ ಮಾಡಿರಲಿಲ್ಲ. ಬದಲಾಗಿ ಯುವ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರು. ಹಾರ್ದಿಕ್ ನಾಯಕತ್ವದಲ್ಲಿ 2-1 ಅಂತರದಲ್ಲಿ ಸರಣಿ ಗೆದ್ದಿದೆ.
ಇದು 2024 ರಲ್ಲಿ ವೆಸ್ಟ್ ಇಂಡೀಸ್, ಯುಎಸ್ಎ ನಡೆಯಲಿರುವ ಟಿ-20 ವರ್ಲ್ಡ್ ಕಪ್ ಗೆ ತಯಾರಿ ಎಂದೇ ಹೇಳಲಾಗುತ್ತಿದೆ.
ರೋಹಿತ್ ಶರ್ಮಾ ಮಾತಾನಾಡುತ್ತಾ, ಮೊದಲನೆಯದಾಗಿ ಬ್ಯಾಕ್ ಟು ಬ್ಯಾಕ್ ಪಂದ್ಯವಾಡಲು ಆಗಲ್ಲ. ಆಟಗಾರರಿಗೆ ಒಂದಷ್ಟು ಬ್ರೇಕ್ ನೀಡಬೇಕು. ನಮಗೆ ನ್ಯೂಜಿಲೆಂಡ್ ವಿರುದ್ಧ ಮೂರು ಟಿ-20 ಪಂದ್ಯಗಳಿವೆ. ಐಪಿಎಲ್ ಆದಾಗ ಏನಾಗುತ್ತದೆ ಎನ್ನುವುದನ್ನು ನೋಡಬೇಕು. ನಾನು ಟಿ-20 ಮಾದರಿ ನಿವೃತ್ತಿ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದರು.
ಏಕದಿನ ವಿಶ್ವಕಪ್ ಇರುವುದರಿಂದ ಎಲ್ಲಾ ಆಟಗಾರರು ಎಲ್ಲಾ ಮಾದರಿಯ ಪಂದ್ಯವನ್ನು ಆಡಲು ಆಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

