ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋತ ಬಳಿಕ ಟೀಮ್ ಇಂಡಿಯಾ ಟೆಸ್ಟ್ ಸರಣಿಗೆ ರೆಡಿಯಾಗಿದೆ.
ಚಟ್ಟೊಗ್ರಾಮ್‌ನಲ್ಲಿ ಡಿ. 14ರಿಂದ ಆರಂಭವಾಗಲಿದೆ. ನಾಯಕ ರೋಹಿತ್ ಶರ್ಮಾ ಅವರು ಬುಧವಾರ ನಡೆದ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ತಂಡಕ್ಕಾಗಿ ಅಮೋಘ ಬ್ಯಾಟಿಂಗ್ ಮಾಡಿ ಗೆಲುವಿನ ಸನಿಹಕ್ಕೆ ಕೊಂಡೊಯ್ದರು.
ಸದ್ಯ ರೋಹಿತ್ ಶರ್ಮಾ ತವರಿಗೆ ಮರಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಅವರ ಜಾಗಕ್ಕೆ ಹೊಸ ಆಟಗಾರನನ್ನು ಟೀಮ್ ಇಂಡಿಯಾ ಆಯ್ಕೆ ಮಾಡಿಕೊಳ್ಳಲಿದೆ.
ಈ ಜಾಗಕ್ಕೆ ಭಾರತ “ಎ’ ತಂಡ ನಾಯಕ ಅಭಿಮನ್ಯು ಈಶ್ವರನ್ ಅವರನ್ನು ಗಾಯಗೊಂಡಿರುವ ನಾಯಕ ರೋಹಿತ್ ಶರ್ಮ ಅವರ ಬದಲಿಗೆ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಯಿದೆ.
ಸದ್ಯ ಈಶ್ವರನ್ ಬಾಂಗ್ಲಾದಲ್ಲಿಯೇ ಸದ್ಯ ಸಾಗುತ್ತಿರುವ “ಎ’ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಈಶ್ವರನ್ ಬೆನ್ನು ಬೆನ್ನಿಗೆ ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ. ಸಿಲ್ಹೆಟ್‌ನಲ್ಲಿ ನಡೆಯುವ ಎರಡನೇ “ಎ’ ಟೆಸ್ಟ್ ಪಂದ್ಯದ ಬಳಿಕ ಈಶ್ವರನ್ ಚಟ್ಟೊಗ್ರಾಮ್‌ನಲ್ಲಿ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ.

