HomeNewsತೆಲುಗಿನಲ್ಲಿ ಇವರೇ ನನ್ನ ಅಚ್ಚು ಮೆಚ್ಚು: ರಿಷಬ್ ಹೇಳಿದ್ದೇನು

ತೆಲುಗಿನಲ್ಲಿ ಇವರೇ ನನ್ನ ಅಚ್ಚು ಮೆಚ್ಚು: ರಿಷಬ್ ಹೇಳಿದ್ದೇನು

ರಿಷಬ್ ಶೆಟ್ಟಿ ಈಗ ‘ಕಾಂತಾರ’ದ ಮೂಲಕ ಎಲ್ಲೆಡೆ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ದೊಡ್ಡ ಪ್ರಶಂಸೆ ಪಡೆದುಕೊಂಡ ಚಿತ್ರ ಈಗ ಅನ್ಯಭಾಷೆಯಲ್ಲೂ ಕಮಾಲ್ ಮಾಡಲು ಸಿದ್ಧವಾಗಿದೆ.


ಮೊದಲ ವಾರದಲ್ಲೇ ಚಿತ್ರ ಕೋಟಿ ಕ್ಲಬ್ ಸೇರಿ ಮುನ್ನುಗುತ್ತಿದೆ. ತುಳುನಾಡಿನ ಆಚಾರ- ವಿಚಾರವನ್ನು ಅರಣ್ಯಕ್ಕೆ ಹೊಂದಿಕೊಂಡಿರುವ ಜನರ ಮೂಲಕ ಹೇಳಿರುವ ರಿಷಬ್ ನಟನೆ, ನಿರ್ದೇಶನ ಎರಡರಲ್ಲೂ ಗೆದ್ದಿದ್ದಾರೆ.


ಈ ಚಿತ್ರ ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ಡಬ್ ಆಗಿದ್ದು, ಹಿಂದಿ ಹಾಗೂ ತೆಲುಗಿನಲ್ಲಿ ಈ ಚಿತ್ರ ಇದೇ ವಾರ ರಿಲೀಸ್ ಆಗಲಿದೆ. ಸದ್ಯ ತೆಲುಗು ಪ್ರೇಕ್ಷಕರನ್ನು ಸೆಳೆಯುವ ಪ್ರಚಾರದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ.


ಸಂದರ್ಶನದಲ್ಲಿ ರಿಷಬ್ ತೆಲಯ ಸ್ಟಾರ್ ನಟರೊಬ್ಬರ ಬಗ್ಗೆ ಮಾತಾನಾಡಿದ್ದಾರೆ. ಬಾಲಯ್ಯ, ಕೃಷ್ಣಗಾರು, ಜೂ.ಎನ್.ಟಿ ಆರ್ ಅವರ ಸಿನಿಮಾಗಳನ್ನು ನೋಡುತ್ತೇನೆ. ಇವರಲ್ಲಿ ನನಗೆ ಜೂ.ಎನ್ ಟಿಆರ್ ಅಂದರೆ ಇಷ್ಟ ಅವರ ತಾಯಿ ನಮ್ಮ ಊರಿನವರು. ಜೂ. ಎನ್.ಟಿ. ಆರ್ ಅದ್ಭುತ ನಟರೆಂದರು. ಅವರೊಂದಿಗೆ ಚಿತ್ರ ಮಾಡುವ ಪ್ಲ್ಯಾನ್ ಇದೆಯೇ ಎನ್ನುವ ಪ್ರಶ್ನೆ ಹೌದು ಎಂದು ರಿಷಬ್ ಉತ್ತರಿಸಿದ್ದಾರೆ.

ಜೂ.ಎನ್ ಟಿ ಆರ್ ಅಮ್ಮ ಶಾಲಿನಿ ಮೂಲತಃ ಕುಂದಾಪುರದವರು. ಇದನ್ನು ಎನ್ ಟಿ‌ಆರ್ ಅನೇಕ ಬಾರಿ ಹೇಳಿದ್ದಾರೆ. ಕನ್ನಡ ಹಾಗೂ ‌ಕರ್ನಾಟಕ ನನ್ನ ಬದುಕಿನ ಬಹು ಮುಖ್ಯ ಅಂಗವೆಂದು ಜೂ.ಎನ್ ಟಿಆರ್ ಈ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

RELATED ARTICLES

Most Popular

Share via
Copy link
Powered by Social Snap