ನಟ ರಿಷಬ್ ಶೆಟ್ಟಿ ಜನಪ್ರಿಯತೆ ‘ಕಾಂತಾರ’ ಬಳಿಕ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಷಬ್ ‘ಶಿವ’ನಾಗಿ ಮಿಂಚಿದ್ದಾರೆ.
ಹೊಂಬಾಳೆ ನಿರ್ಮಾಣದ ‘ಕಾಂತಾರ’ ಈಗ ಎರಡನೇ ಭಾಗದ ಚಿತ್ರೀಕರಣಕ್ಕೆ ರೆಡಿಯಾಗಿದೆ. ಮಳೆಗಾಲದ ವೇಳೆಗೆ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.
ಈ ನಡುವೆ ‘ಕಾಂತಾರ-2’ ಗೂ ಮೊದಲು ರಿಷಬ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ಮಾತ್ರ ಕುತೂಹಲ. ಆದರೆ ಈ ಬಗ್ಗೆ ಸುದ್ದಿಯೊಂದು ಹೊರ ಬಿದ್ದಿದೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ‘ಮಲೈಕೊಟ್ಟೈ ವಾಲಿಬನ್’ ಚಿತ್ರದಲ್ಲಿ ರಿಷಬ್ ಶೆಟ್ಟಿ ಒಂದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿಯೊಂದು ಸದ್ದು ಮಾಡುತ್ತಿದೆ.
ಮಾಲಿವುಡ್ ನ ಖ್ಯಾತ ನಿರ್ದೇಶಕ ಲಿಜು ಜೋಸೆಫ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್, ಜೀವಾ, ಮರಾಠಿ ನಟಿ ಸೊನಾಲಿ ಕುಲಕರ್ನಿ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

