ನಟ ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರದ ಅತ್ಯದ್ಭುತ ಸಕ್ಸಸ್ ಬಳಿಕ ಹಲವು ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಹಿಟ್ ಆದ ನಂತರ ರಿಷಬ್ ಶೆಟ್ಟಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಹಿಂದಿ,ತಮಿಳು ಸೇರಿದಂತೆ ಅನ್ಯಭಾಷಾ ಮಾಧ್ಯಮಗಳಿಗೆ ರಿಷಬ್ ಅವರು ಸಂದರ್ಶನ ನೀಡಿದ್ದಾರೆ.
ನೆಟ್ ಫ್ಲಿಕ್ಸ್ ನಲ್ಲಿ ವಿಶೇಷ ಸಂದರ್ಶನ ನೀಡಿರುವ ವೇಳೆಯಲ್ಲಿ 2022 ರಲ್ಲಿ ತಮ್ಮ ಮೆಚ್ಚಿನ ಚಿತ್ರ ಯಾವುದೆಂದು ಹೇಳಿದ್ದಾರೆ.
ನಿರೂಪಕರು 2022 ರಲ್ಲಿ ನೀವು ಇಷ್ಟಪಟ್ಟ ಸಿನಿಮಾ ಯಾವುದೆಂದು ಕೇಳಿದ್ದಾರೆ. ಇದಕ್ಕೆ ರಿಷಬ್ ಅವರು ಅಪ್ಪು ಅವರ ‘ಗಂಧದ ಗುಡಿ’ ಹೆಸರನ್ನು ಮೊದಲಿಗೆ ಹೇಳಿದ್ದಾರೆ.
ಆ ಬಳಿಕ ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’, ಕಾಲಿವುಡ್ ನಲ್ಲಿ ಇತ್ತೀಚೆಗೆ ತೆರೆಕಂಡು ಸದ್ದು ಮಾಡಿದ ‘ಲವ್ ಟುಡೇ’, ಹಾಗೂ ‘ಕೆಜಿಎಫ್-2’ ಎಂದು ಹೇಳಿದ್ದಾರೆ.
ಸದ್ಯ ರಿಷಬ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದು ರಹಸ್ಯವಾಗಿ ಉಳಿದಿದೆ. ‘ಕಾಂತಾರ-2’ ಅಥವಾ ‘ಬೆಲ್ ಬಾಟಂ-2’ ಸಿನಿಮಾಗಳು ಬರುವ ಸಾಧ್ಯತೆಯಿವೆ.

